×
Ad

ಸಿಡಿ ಪ್ರಕರಣದಲ್ಲಿ ಬಿಜೆಪಿ ನಾಯಕರ ಪಾತ್ರವೂ ಇರುವ ಸಾಧ್ಯತೆ: ಶಾಸಕ ಯತ್ನಾಳ್

Update: 2021-03-15 23:03 IST

ಬೆಂಗಳೂರು, ಮಾ. 15: ‘ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಸಿಡಿ ಪ್ರಕರಣದ ಹಿಂದೆ ಕೇವಲ ಕಾಂಗ್ರೆಸ್ ನಾಯಕರ ಪಾತ್ರವಷ್ಟೇ ಇಲ್ಲ. ಇದರ ಹಿಂದೆ ಬಿಜೆಪಿ ಮುಖಂಡರ ಕೈವಾಡ ಇರುವ ಸಾಧ್ಯತೆಯೂ ಇರಬಹುದು' ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇಂದಿಲ್ಲಿ ಆಪಾದಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಸಿಡಿ ಪ್ರಕರಣದಲ್ಲಿ ಕೇಳಿಬರುತ್ತಿರುವ ಪತ್ರಕರ್ತನ ಪುತ್ರಿಯ ಜನ್ಮದಿನ ಕಾರ್ಯಕ್ರಮಕ್ಕೆ ಬಿಜೆಪಿ ನಾಯಕರೂ ಹೋಗಿದ್ದರು. ಅವರ ಫೋಟೊಗಳನ್ನೂ ಬಿಡುಗಡೆ ಮಾಡಬೇಕು. ಅಲ್ಲದೆ, ಕಾರ್ಯಕ್ರಮದಲ್ಲಿ ಯಾರ್ಯಾರು ಇದ್ದರು ಎಂದು ಬೆಳಕಿಗೆ ಬರಬೇಕಿದೆ' ಎಂದರು.

ಸಿಎಂ ವಿರುದ್ಧ ನನ್ನ ಹೋರಾಟ ನಿಲ್ಲದು: ಮುಖ್ಯಮಂತ್ರಿ ಮತ್ತವರ ಕುಟುಂಬ ಸದಸ್ಯರ ಭ್ರಷ್ಟಾಚಾರದ ವಿರುದ್ಧ ನನ್ನ ಹೋರಾಟ ನಿಲ್ಲದು ಎಂದು ಎಚ್ಚರಿಸಿದ ಬಸನಗೌಡ ಪಾಟೀಲ್ ಯತ್ನಾಳ್, ಕುಟುಂಬ ರಾಜಕಾರಣದ ವಿರುದ್ಧವೂ ನಾನು ಹೋರಾಟ ಮುಂದುವರಿಸಲಿದ್ದೇನೆ. ವರ್ಗಾವಣೆ ದಂಧೆ ಮಿತಿ ಮೀರಿದ್ದು ಸಿಎಂ ಕುಟುಂಬ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ದೂರಿದರು.

ನಾನು ಮೋದಿ ಬೆಂಬಲಿಗ: ನಾನು ಬಿಜೆಪಿಯ ಸಾಮಾನ್ಯ ಕಾರ್ಯಕರ್ತ. ಪ್ರಧಾನಿ ಮೋದಿಯವರ ಕಟ್ಟಾ ಬೆಂಬಲಿಗ. ನಾನು ಎಂದೂ ಯಾರ ಪರವಾಗಿಯೂ ನಿಲ್ಲುವುದಿಲ್ಲ. ನಾನು ಯಾರೊಬ್ಬರ ಏಜೆಂಟು ಕೂಡ ಅಲ್ಲ. ಯಾರನ್ನು ಬೆಂಬಲಿಸಲು ನನಗೆ ಹುಚ್ಚು ಹಿಡಿದಿಲ್ಲ ಎಂದು ಯತ್ನಾಳ್ ಇದೇ ವೇಳೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News