ನೆಲ, ಜಲ ಸಂರಕ್ಷಣೆಗೆ ಯಾವುದೇ ಬೆಲೆ ತೆರುವುದಕ್ಕೂ ಸರಕಾರ ಸಿದ್ಧ: ಗಡಿ ವಿವಾದದ ಬಗ್ಗೆ ಸಚಿವ ಅಶೋಕ್

Update: 2021-03-20 12:15 GMT

ಬೆಳಗಾವಿ, ಮಾ.20: ಬೆಳಗಾವಿಯಲ್ಲಿ ಶಿವಸೇನೆ ಕಾರ್ಯಕರ್ತರ ಪುಂಡಾಟಿಕೆ ಹೆಚ್ಚುತ್ತಿದ್ದು, ಇದರ ತಡೆಗೆ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ಬಹಳಷ್ಟು ಮರಾಠಿಗರು ಶಾಂತಿ ಬಯಸುತ್ತಾರೆ. ಕೆಲವರು ಮಾತ್ರ ಪುಂಡಾಟಿಕೆ ನಡೆಸುತ್ತಿದ್ದಾರೆ. ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸ್ ಹಾಗೂ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಬೆಳಗಾವಿ ಸೇರಿದಂತೆ ಗಡಿ ರಕ್ಷಣೆ ವಿಷಯದಲ್ಲಿ ರಾಜಿಯಾಗುವುದಿಲ್ಲ. ನೆಲ, ಜಲ ಸಂರಕ್ಷಣೆಗೆ ಯಾವುದೇ ಬೆಲೆ ಬೇಕಾದರೂ ತೆರುವುದಕ್ಕೆ ನಮ್ಮ ಸರಕಾರ ಸಿದ್ಧವಿದೆ. ಈ ಬಗ್ಗೆ ಶಿವಸೇನೆ ಎಚ್ಚರಿಕೆ ವಹಿಸಬೇಕು. ಪುಂಡಾಟಿಕೆ ಹೆಚ್ಚಾದರೆ ಕಠಿಣ ಕ್ರಮ ಕೈಗೊಳ್ಳಲು ಹಿಂದು ಮುಂದು ನೋಡುವುದಿಲ್ಲವೆಂದು ಅವರು ಎಚ್ಚರಿಕೆ ನೀಡಿದ್ದಾರೆ.

ಶಿವಸೇನೆ ಸಂಘಟನೆಯ ನಿಷೇಧ ಕುರಿತು ಪ್ರತಿಕ್ರಿಯಿಸಿದ ಅವರು, ಶಿವಸೇನೆ ರಾಜಕೀಯ ಪಕ್ಷ. ಅದನ್ನು ನಿಷೇಧಿಸಲು ಕಾನೂನಿನಲ್ಲಿ ಅವಕಾಶ ಇದೆಯೋ, ಇಲ್ಲವೋ ನನಗೆ ಗೊತ್ತಿಲ್ಲ. ಈ ಬಗ್ಗೆ ಚರ್ಚಿಸಲಾಗುವುದೆಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News