×
Ad

ಏಳು ಕೆಎಎಸ್ ಅಧಿಕಾರಿಗಳ ವರ್ಗಾವಣೆ

Update: 2021-03-20 18:48 IST

ಬೆಂಗಳೂರು, ಮಾ. 20: ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದಲೇ ಜಾರಿಗೆ ಬರುವಂತೆ ಏಳು ಮಂದಿ ಕೆಎಎಸ್ ಅಧಿಕಾರಿಗಳು ಅವರ ಹೆಸರಿನ ಮುಂದಿನ ಸೂಚಿತ ಸ್ಥಳಕ್ಕೆ ಈ ಕೂಡಲೇ ನಿಯೋಜನೆಗೊಳ್ಳುವಂತೆ ವರ್ಗಾವಣೆ ಮಾಡಿ ರಾಜ್ಯ ಸರಕಾರ ಶನಿವಾರ ಆದೇಶ ಹೊರಡಿಸಿದೆ.

ರಾಜು ಮೊಗವೀರ ಕೆ. - ಅಪರ ಜಿಲ್ಲಾಧಿಕಾರಿ ಮತ್ತು ಅಪರ ಜಿಲ್ಲಾ ದಂಡಾಧಿಕಾರಿ ಕೊಡಗು ಜಿಲ್ಲೆ, ಡಾ.ರೂಪಶ್ರೀ ಎಸ್.- ಜಂಟಿ ಆಡಳಿತ ನಿದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿ ಬೆಂಗಳೂರು, ವಿಜಯ್‍ಕುಮಾರ್ ಹೊನಕೇರಿ- ಪ್ರಾಂಶುಪಾಲರು ಜಿಲ್ಲಾ ತರಬೇತಿ ಸಂಸ್ಥೆ ಬೆಳಗಾವಿ, ಎಲ್.ಸಿ. ನಾಗರಾಜು-ಆಡಳಿತ ಅಧಿಕಾರಿ, ಸಕಾಲ ಮಿಷನ್ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ.

ಪ್ರಸನ್ನಕುಮಾರ್ ವಿ.ಕೆ.- ವಿಶೇಷ ಭೂಸ್ವಾಧೀನಾಧಿಕಾರಿ ತುಮಕೂರು-ದಾವಣಗೆರೆ ನೇರ ರೈಲು ಮಾರ್ಗ ಯೋಜನೆ ಚಿತ್ರದುರ್ಗ ಜಿಲ್ಲೆ, ವೆ.ಎನ್.ಚಂದ್ರಮ್ಮ-ವಲಯ ಆಯುಕ್ತರು, ಮೈಸೂರು ಮಹಾನಗರ ಪಾಲಿಕೆ ಮೈಸೂರು, ಖಾಝಿ ನಫೀಸ-ಸಹಾಯಕ ಆಯುಕ್ತರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಬೆಂಗಳೂರು ಇಲ್ಲಿಗೆ ನಿಯೋಜನೆ ಮಾಡಿ ಸರಕಾರದ ಅಧೀನ ಕಾರ್ಯದರ್ಶಿ ಉಮಾದೇವಿ ಆದೇಶ ಹೊರಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News