×
Ad

ಮಾ.26ರಂದು ಪಿಜಿ ಆಯುಷ್ ಕೋರ್ಸುಗಳ ಪ್ರವೇಶಕ್ಕಾಗಿ ಎರಡನೆ Mop-up 2020

Update: 2021-03-20 22:23 IST

ಬೆಂಗಳೂರು, ಮಾ.20: 2020ನೆ ಸಾಲಿನ ಪಿಜಿಆಯುಷ್ ಕೋರ್ಸುಗಳ ಪ್ರವೇಶಕ್ಕಾಗಿ ಎರಡನೆ Mop-up ಸುತ್ತಿನ ಸೀಟು ಹಂಚಿಕೆಯನ್ನು ಮಾ.26ರಂದು ಬೆಳಗ್ಗೆ 11 ಗಂಟೆಯಿಂದ ನಡೆಸಲಾಗುವುದು. Mop-up ಸುತ್ತಿನ ನಂತರ ಖಾಲಿ ಇರುವ ಸೀಟುಗಳನ್ನು ಹಂಚಿಕೆಗೆ ಪರಿಗಣಿಸಲಾಗುವುದು.

ಭಾರತ ಸರಕಾರದ ಆಯುಷ್ ಮಂತ್ರಾಲಯವು AIAPGET 2020ರಲ್ಲಿ ಕನಿಷ್ಠ ಅರ್ಹತೆಯ ಅಂಕಗಳನ್ನು ಪರಿಷ್ಕರಿಸಿದ ಹಿನ್ನೆಲೆಯಲ್ಲಿ ಅರ್ಹಗೊಳ್ಳುವ ಅಭ್ಯರ್ಥಿಗಳೂ ಮಾ.22ರ ಬೆಳಗ್ಗೆ 11 ರಿಂದ ಮಾ.24ರ ಸಂಜೆ 5.30ರವರೆಗೆ ಆನ್‍ಲೈನ್ ನೋಂದಣಿ ಮಾಡಿ ಎರಡನೇ Mop-up ಸುತ್ತಿನಲ್ಲಿ ಭಾಗವಹಿಸಬಹುದಾಗಿದೆ.

ಈ ಮೊದಲು ನೋಂದಣಿ ಮಾಡದಿರುವ ಅರ್ಹ ಅಭ್ಯರ್ಥಿಗಳೂ ನೋಂದಣಿ ಮಾಡಿ Mop-up ಮಾಡಿ ಮಾ.25ರಂದು ಮೂಲ ದಾಖಲೆಗಳ ಪರಿಶೀಲನೆಗೆ ಹಾಜರಾಗಬಹುದಾಗಿದೆ ಎಂದು ರಾಜ್ಯ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News