ಜೆಎಎಂ-2021 ಫಲಿತಾಂಶ ಪ್ರಕಟ
Update: 2021-03-20 23:06 IST
ಬೆಂಗಳೂರು, ಮಾ.20: ಎಂಎಸ್ಸಿ ಕೋರ್ಸ್‍ಗಳ ಪ್ರವೇಶಾತಿಗೆ ಭಾರತೀಯ ವಿಜ್ಞಾನ ಸಂಸ್ಥೆ ನಡೆಸಿದ ಜೆಎಎಂ-2021 ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು. 14,725 ಅಭ್ಯರ್ಥಿಗಳು ಕಾಲೇಜುಗಳ ಪ್ರವೇಶಾತಿಗೆ ಅರ್ಹತೆಯನ್ನು ಪಡೆದಿದ್ದಾರೆ.
ಬೆಂಗಳೂರು ವಿಜ್ಞಾನ ಸಂಸ್ಥೆ ನಡೆಸಿದ ಜೆಎಎಂ-2021ರ ಪರೀಕ್ಷೆಗೆ ದೇಶಾದ್ಯಂತ 75,051 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದರು. ಕಳೆದ ಫೆ.14ರಂದು ದೇಶದ 151 ಕೇಂದ್ರಗಳಲ್ಲಿ ನಡೆದ ಪರೀಕ್ಷೆಯಲ್ಲಿ 58,969 ಅಭ್ಯರ್ಥಿಗಳು ಭಾಗವಹಿಸಿ, 14,725 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ.
ಜೆಎಎಂ 2021 ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ವೆಬ್‍ಸೈಟ್: https://joaps.iisc ಗೆ ಭೇಟಿ ನೀಡಿ, ಫಲಿತಾಂಶವನ್ನು ನೋಡಬಹುದಾಗಿದೆ. ಮಾ.27ರಿಂದ ಅರ್ಹತಾ ಪಟ್ಟಿಯಲ್ಲಿರುವ ಅಭ್ಯರ್ಥಿಗಳು ಸ್ಕೋರ್ ಕಾರ್ಡ್‍ಗಳನ್ನು ಡೌನ್‍ಲೋಡ್ ಮಾಡಿಕೊಳ್ಳಬಹುದಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.