ಭತ್ತದ ಗದ್ದೆಗೆ ಇಳಿದು ಕಳೆ ತೆಗೆದ ತಹಶೀಲ್ದಾರ್ ರೂಪಾ

Update: 2021-03-20 18:17 GMT

ಮಂಡ್ಯ, ಮಾ.20: ಶ್ರೀರಂಗಪಟ್ಟಣದ ತಹಶೀಲ್ದಾರ್ ರೂಪಾ ಅವರು ಶನಿವಾರ ನಡೆದ “ಅಧಿಕಾರಿಗಳ ನಡೆ ಹಳ್ಳಿಯ ಕಡೆ” ಕಾರ್ಯಕ್ರಮದಲ್ಲಿ ಭತ್ತದ ಗದ್ದೆಗೆ ಇಳಿದು ಕಳೆ ತೆಗೆಯುವ ಮೂಲಕ ಗಮನ ಸೆಳೆದರು.

ತಾಲೂಕು ಆಡಳಿತ ಶ್ರೀರಂಗಪಟ್ಟಣ ತಾಲೂಕಿನ ನಗುವನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರೂಪಾ ಅವರು ಇತರ ಮಹಿಳೆಯರ ಜತೆ ಭತ್ತದ ಗದ್ದೆಯಲ್ಲಿ ಕಳೆ ತೆಗೆದು ಗ್ರಾಮಸ್ಥರಿಂದ ಸೈ ಎನಿಸಿಕೊಂಡರು.

ತಾಲೂಕಿನ ಜನರ ಯಾವುದೇ ಸಮಸ್ಯೆಯನ್ನು ಖುದ್ದಾಗಿ ಪರಿಶೀಲಿಸಿ ಪರಿಹರಿಸುವ ಕಾರಣದಿಂದ ಇವರು ಜನಸ್ನೇಹಿ ಅಧಿಕಾರಿಯಾಗಿ, ತಾಲೂಕಿನ ಅಭಿವೃದ್ದಿಗೆ ಪಕ್ಷಾತೀತವಾಗಿ ಕೆಲಸ ಮಾಡುವ ಕಾರಣದಿಂದ ಜನರು ಮತ್ತು ಜನಪ್ರತಿನಿಧಿಗಳ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News