ಕೇರಳ ವಿಧಾನಸಭಾ ಚುನಾವಣೆ: ಸಹ ವೀಕ್ಷಕರಾಗಿ ಟಿ.ಎಂ.ಶಾಹಿದ್ ನೇಮಕ
Update: 2021-03-21 23:11 IST
ಮಡಿಕೇರಿ, ಮಾ.21: ಕೆಪಿಸಿಸಿ ಮಾಜಿ ಕಾರ್ಯದರ್ಶಿ, ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಹಾಗೂ ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ.ಶಾಹಿದ್ ಅವರನ್ನು ಕೇರಳ ರಾಜ್ಯ ವಿಧಾನಸಭಾ ಚುನಾವಣೆಯ ಕ್ಯಾಲಿಕಟ್ (ಉತ್ತರ) ಮತ್ತು ಎಂಟು ಜಿಲ್ಲೆಗಳ ಮುಖ್ಯ ಕಚೇರಿಯ ಸಹ ವೀಕ್ಷಕರನ್ನಾಗಿ ನೇಮಿಸಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಆದೇಶ ಹೊರಡಿಸಿದ್ದಾರೆ.