ವಿಧಾನಮಂಡಲ ಅಧಿವೇಶನ ಮಧ್ಯಾಹ್ನ 3 ಗಂಟೆಗೆ ಮುಂದೂಡಿದ ಸ್ಪೀಕರ್ ಕಾಗೇರಿ
Update: 2021-03-22 13:30 IST
ಬೆಂಗಳೂರು, ಮಾ. 22: ರಾಜ್ಯ ರಾಜಕೀಯದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಸಿರುವ, ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ 'ಅಶ್ಲೀಲ ಸಿಡಿ ಪ್ರಕರಣ' ವಿಧಾನಸಭೆಯಲ್ಲಿ ಇಂದು ಮತ್ತೊಮ್ಮೆ ಪ್ರತಿಧ್ವನಿಸಿತು.
‘ಸಿಡಿ ಪ್ರಕರಣ' ಸಂಬಂಧ ಚರ್ಚೆಗೆ ಅವಕಾಶ ಕೋರಿ ‘ನಿಲುವಳಿ ಸೂಚನೆ' ಮಂಡಿಸಲು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಸ್ಪೀಕರ್ ಕಾಗೇರಿ ಆಹ್ವಾನಿಸಿದರು. ಈ ಸಂದರ್ಭ ಗೃಹ ಸಚಿವ ಬೊಮ್ಮಾಯಿ, ಇದು 'ನಿಲುವಳಿ ಸೂಚನೆ' ಅಡಿಯಲ್ಲಿ ಬರುವುದಿಲ್ಲ ಎಂದು ತಿಳಿಸಿದರು.
ಬಳಿಕ ಸ್ಪೀಕರ್ ಕಾಗೇರಿ ಅವರು ಮಾತನಾಡಿ, ಮೂರು ಗಂಟೆಗೆ ಈ ಬಗ್ಗೆ ಚರ್ಚೆಗೆ ಅವಕಾಶ ಕೊಡಲಾಗುವುದು ಎಂದು ಹೇಳಿ ಸದನವನ್ನು 3 ಗಂಟೆಗೆ ಸೇರುವಂತೆ ಮುಂದೂಡಿದರು.