×
Ad

ಕರ್ತವ್ಯ ನಿರ್ವಹಣೆಯಲ್ಲಿ ಪೊಲೀಸರು ಸಂಪೂರ್ಣ ವಿಫಲ: ಸಿಡಿ ಪ್ರಕರಣದ ಬಗ್ಗೆ ಸಿದ್ದರಾಮಯ್ಯ

Update: 2021-03-22 17:50 IST

ಬೆಂಗಳೂರು, ಮಾ. 22: ಆರು ಮಂತ್ರಿಗಳಿಗೆ ಅಧಿಕಾರದಲ್ಲಿರಲು ಯಾವುದೇ ನೈತಿಕತೆ ಇಲ್ಲ. ತಮಗೆ ಭಯ, ಆತಂಕ ಇದೆ, ಸಿಡಿ ಬಿಡುಗೆಯಾಗುವ ಬಗ್ಗೆ ಭಯವಿದೆ ಎಂದು ಕೋರ್ಟ್ ಮೊರೆ ಹೋದದ್ದು ಕರ್ನಾಟಕದ ಇತಿಹಾಸದಲ್ಲಿ ಇದೇ ಮೊದಲು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ನಿಯಮ 69ರ ಅಡಿಯಲ್ಲಿ ಮಾತನಾಡಿದ ಅವರು, ಸಿಡಿ ಪ್ರಕರಣದ ನಿರ್ವಹಿಸುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ. IPC ಸೆಕ್ಷನ್ 376ರ ಅಡಿಯಲ್ಲಿ ಕೇಸು ದಾಖಲಿಸಿ ತನಿಖೆ ನಡೆಸಬೇಕು. ಇಲ್ಲದಿದ್ದರೆ ಆ ಯುವತಿಗೆ ನ್ಯಾಯ ಸಿಗುವುದಿಲ್ಲ ಎಂದು ಹೇಳಿದರು.

ಯುವತಿ ಹೇಳಿಕೆ ಆಧರಿಸಿ ಹೇಳುವುದಾದರೆ ಇದು ಅತ್ಯಾಚಾರ. ಆದರೆ ಪೊಲೀಸರು ಏಕೆ ಪ್ರಕರಣ ದಾಖಲಿಸಿಲ್ಲ. ಯುವತಿಗೆ ನ್ಯಾಯ ಸಿಗಬೇಕಾದರೆ ಪ್ರಕರಣ ದಾಖಲಾಗಬೇಕಿತ್ತು. ಪೊಲೀಸರು ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ. ಜಾರಕಿಹೊಳಿಗೆ ಒಂದು ನ್ಯಾಯ ಯುವತಿಗೆ ಒಂದು ನ್ಯಾಯವೇ ಎಂದು ಪ್ರಶ್ನಿಸಿದರು.

ಇವರು ಬೇರೆ ಎಲ್ಲರನ್ನೂ ಕರೆಸಿ ವಿಚಾರಣೆ ಮಾಡಿದ್ದಾರೆ. ಆದರೆ ಯುವತಿಕೆ ರಕ್ಷಣೆ ಕೊಡುವ ಕೆಲಸ ಆಗಿಲ್ಲ ಎಂದು ದೂರಿದರು. ಹೈಕೋರ್ಟ್ ಸಿಜೆ ಮೂಲಕ ಇದರ ತನಿಖೆಯಾಗಲಿ ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News