×
Ad

ಅಧಿಕಾರಸ್ಥರ ತಪ್ಪಿಗೆ ಶಿಕ್ಷೆ ಆಗದಿದ್ದರೆ ಸಮಾಜಕ್ಕೆ ಒಳ್ಳೆಯ ಸಂದೇಶ ಹೋಗಲ್ಲ: ಸಿದ್ದರಾಮಯ್ಯ

Update: 2021-03-22 22:11 IST

ಬೆಂಗಳೂರು, ಮಾ.22: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಪೊಲೀಸರು ಸೆಕ್ಷನ್ 376 ಅಡಿಯಲ್ಲಿ ಪ್ರಕರಣ ದಾಖಲು ಮಾಡಬೇಕಿತ್ತು. ಆದರೆ, ಮಾಡಿಲ್ಲ. ಈ ಪ್ರಕರಣ ತನಿಖೆ ನಡೆಸಲು ನಿಯಮಗಳನ್ನು ಪೊಲೀಸರೆ ಮಾಡಿಕೊಳ್ಳುವುದಾದರೆ, ಸರಕಾರದ ಪಾತ್ರವೇನು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.

ವಿಧಾನಸಭೆಯಲ್ಲಿ ಸಿಡಿ ವಿಚಾರದಲ್ಲಿ ಮಾತನಾಡಿದ ಅವರು, ಈ ಪ್ರಕರಣದಲ್ಲಿ ವಿಚಾರಣೆಗೊಳಪಟ್ಟಿರುವ ಚೇತನ್ ಎಂಬವರು ಅವರ ವಕೀಲ ಸೂರ್ಯ ಮುಕುಂದರಾಜ್ ನಡುವೆ ನಡೆಸಿರುವ ಸಂಭಾಷಣೆಯನ್ನು ಟೆಲಿಫೋನ್ ಕದ್ದಾಲಿಕೆ ಮಾಡಿರುವುದು ತಿಳಿದು ಬಂದಿದೆ. ವಕೀಲ ಹಾಗೂ ಆತನ ಕಕ್ಷಿದಾರ ನಡುವಿನ ಚರ್ಚೆಯನ್ನು ಬಹಿರಂಗವಾಗಿ ಹೇಳುವ ಅಗತ್ಯವಿಲ್ಲ. ಆದರೆ, ಅವರ ಟೆಲಿಫೋನ್‍ಗಳನ್ನು ಕದ್ದಾಲಿಕೆ ಮಾಡಿರುವುದು ಒಪ್ಪುವಂತಹದ್ದಲ್ಲ. ಅದು ಅಪರಾಧ ಎಂದು ಹೇಳಿದರು.

ಬಿಜೆಪಿ ಶಾಸಕ ಯತ್ನಾಳ್ ಬೆಂಗಳೂರಿನಲ್ಲಿ ಸಿಡಿ ಮಾಡುವ ಒಂದು ಗ್ಯಾಂಗ್ ಇದೆ, ಅವರು ಸಿಡಿಗಳನ್ನು ಸಿಎಂಗೆ ತೋರಿಸಿ ಬ್ಲ್ಯಾಕ್‍ಮೇಲ್ ಮಾಡಿದ್ದಾರೆ ಎಂದು ಹೇಳಿದ್ದಾರೆ. ಅಧಿಕಾರಸ್ಥರು ಮಾಡುವ ತಪ್ಪಿಗೆ ಶಿಕ್ಷೆ ಆಗದೇ ಹೋದರೆ ಸಮಾಜಕ್ಕೆ ಒಳ್ಳೆಯ ಸಂದೇಶ ಹೋಗಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News