×
Ad

ಮುಖ್ಯಮಂತ್ರಿಗಳ ಪದಕಕ್ಕೆ 115 ಪೊಲೀಸರು ಆಯ್ಕೆ

Update: 2021-03-23 21:53 IST

ಬೆಂಗಳೂರು, ಮಾ.23: ಐಪಿಎಸ್‌ ಅಧಿಕಾರಿಗಳು ಸೇರಿದಂತೆ ರಾಜ್ಯದ ಒಟ್ಟು 115 ಪೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿಯನ್ನು 2020ನೆ ವಾರ್ಷಿಕ ಸಾಲಿನ ಮುಖ್ಯಮಂತ್ರಿಗಳ ಪದಕಕ್ಕೆ ಆಯ್ಕೆ ಮಾಡಲಾಗಿದೆ.

ಪೊಲೀಸ್ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಸಾಧಕರಿಗೆ ಪ್ರತಿ ವರ್ಷವೂ ಮುಖ್ಯಮಂತ್ರಿಯ ಪದಕ ಘೋಷಿಸಲಾಗುತ್ತಿದ್ದು, ದಕ್ಷಿಣ ಕನ್ನಡ, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಯ ಪೊಲೀಸರು ಈ ಪದಕ್ಕೆ ಭಾಜನರಾಗಿದ್ದಾರೆ.

ಬೆಂಗಳೂರು ಎಸಿಬಿ ಎಸ್ಪಿ ಉಮಾ‌ ಪ್ರಶಾಂತ್,  ಬೆಂಗಳೂರು ಮಲ್ಲೇಶ್ವರಂ ಉಪವಿಭಾಗದ ಸಹಾಯ ಪೊಲೀಸ್ ಆಯುಕ್ತ ಕೆ.ಎಸ್.ವೆಂಕಟೇಶ ನಾಯ್ಡು, ಸಿಐಡಿ ಆರ್ಥಿಕ ಅಪರಾಧಗಳ ವಿಭಾಗದ ಡಿವೈಎಸ್ಪಿ ಪಿ.ಕೆ.ಮುರಳೀಧರ, ಕೆಆರ್ ಪುರ ಸಂಚಾರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಎಂ.ಎ.ಮುಹಮ್ಮದ್, ಬೆಂಗಳೂರು ಸಿಸಿಬಿ ವಿಭಾಗದ ಮುಖ್ಯಪೇದೆ ಜೆ.ನವಾಝ್ ಖಾನ್,  ಮಂಗಳೂರು ಸಿಸಿಬಿ ವಿಭಾಗದ ಹೆಡ್‌ಕಾನ್ಸ್‌ಟೇಬಲ್ ಅಬ್ದುಲ್ ಜಬ್ಬಾರ್ ಕೆ., ಎಎಸ್ಸಿ ಎಚ್.ಎಂ.ಅಖ್ತಾರ್ ಅಹ್ಮದ್,  ಪಾಂಡೇಶ್ವರ ಠಾಣೆಯ ಹೆಡ್‌ಕಾನ್ಸ್‌ಟೇಬಲ್ ನಯನಾ, ಬಂದರ್ ಠಾಣೆಯ ಹೆಡ್‌ಕಾನ್ಸ್‌ಟೇಬಲ್ ಸುಜನ್ ಶೆಟ್ಟಿ, ದ.ಕ.ಜಿಲ್ಲಾ ಸಿಡಿಆರ್ ವಿಭಾಗದ ಪೊಲೀಸ್ ಕಾನ್ಸ್‌ಟೇಬಲ್ ಸಂಪತ್ ಕುಮಾರ್ ಬಿ., ಉಪ್ಪಿನಂಗಡಿ ಠಾಣೆಯ ಪೊಲೀಸ್ ಕಾನ್ಸ್‌ಟೇಬಲ್ ಪ್ರವೀಣ್ ರೈ ಸೇರಿದಂತೆ 115 ಪೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿಗಳು ಕರ್ತವ್ಯದ ವೇಳೆ ತೋರಿದ ಸಾಧನೆಗಾಗಿ ಮುಖ್ಯಮಂತ್ರಿ ಪದಕ ಘೋಷಿಸಲಾಗಿದೆ ಎಂದು ಎಡಿಜಿಪಿ(ಆಡಳಿತ) ಡಾ.ಎಂ.ಎ.ಸಲೀಂ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News