ಕಂಪ್ಯೂಟರ್ ಉಪಕರಣ ಬುಕ್ ಮಾಡಲು ಹೋಗಿ ಹಣ ಕಳೆದುಕೊಂಡ ಬ್ಯಾಂಕ್ ಉದ್ಯೋಗಿ
ಶಿವಮೊಗ್ಗ: ಅಮೆಝಾನ್ ಹೆಲ್ಪ್‌ಕೇರ್ ಪ್ರತಿನಿಧಿಯಂತೆ ಕರೆ ಮಾಡಿ ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ 65 ಸಾವಿರ ರೂ. ವಂಚಿಸಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಶಿವಮೊಗ್ಗದ ಬ್ಯಾಂಕ್ ಉದ್ಯೋಗಿಯೊಬ್ಬರು ಅಮೆಝಾನ್ ಮೂಲಕ ಆನ್‌ಲೈನ್‌ನಲ್ಲಿ ಕಂಪ್ಯೂಟರ್ ಉಪಕರಣವೊಂದನ್ನು ಖರೀದಿಸಲು ಮುಂದಾಗಿದ್ದಾರೆ.ಮೂರು ಬಾರಿ ಹಣ ಸಂದಾಯವಾದರೂ ಆರ್ಡ್‌ರ್ ಬುಕ್ ಆಗಿರಲಿಲ್ಲ. ಆದ್ದರಿಂದ ಅಮೆಝಾನ್ ಹೆಲ್ಪ್ ಸೆಂಟರ್‌ಗೆ ಕಾಲ್‌ಬ್ಯಾಕ್ ರಿಕ್ವೆಸ್ಟ್ ಕಳುಹಿಸಿದ್ದರು ಎನ್ನಲಾಗಿದೆ.
ಮರುದಿನ ಕರೆ ಮಾಡಿದ್ದ ವ್ಯಕ್ತಿಯೊಬ್ಬ ತನ್ನನ್ನು ಅಮೆಝಾನ್ ಹೆಲ್ಪ್‌ಸೆಂಟರ್ ಪ್ರತಿನಿಧಿ ಎಂದು ಪರಿಚಯಿಸಿಕೊಂಡಿದ್ದಾನೆ. ಬಳಿಕ ವೆಬ್‌ಸೈಟ್ ಒಂದರ ಲಿಂಕ್ ಕಳುಹಿಸಿ ಇದರಲ್ಲಿ ಸರ್ವೆ ಒಂದನ್ನು ಭರ್ತಿ ಮಾಡುವಂತೆ ಸೂಚಿಸಿದ್ದಾನೆ. ಅದರಂತೆ ಬ್ಯಾಂಕ್ ಉದ್ಯೋಗಿ ಸರ್ವೆಯನ್ನು ಭರ್ತಿ ಮಾಡಿದ್ದಾರೆ. ಶೀಘ್ರದಲ್ಲೆ ನಮ್ಮ ಹಣವು ನಿಮ್ಮ ಖಾತೆಗೆ ಬರಲಿದೆ ಎಂದು ತಿಳಿಸಿದ್ದಾನೆ ಎನ್ನಲಾಗಿದೆ.
ಮೂರು ದಿನಗಳ ಬಳಿಕ ಬ್ಯಾಂಕ್ ಉದ್ಯೋಗಿಯ ಮೊಬೈಲ್ ನಂಬರ್‌ಗೆ ಹಣ ಕಡಿತವಾದ ಮೆಸೇಜ್ ಬಂದಿದೆ. ಮೊದಲ ಬಾರಿಗೆ 30 ಸಾವಿರ ಹಾಗೂ ಆ ಬಳಿಕ ಏಳು ಬಾರಿ ತಲಾ 5 ಸಾವಿರದಂತೆ ಹಣ ತೆಗೆಯಲಾಗಿದೆ. ಬಳಿಕ ಬ್ಯಾಂಕ್ ಉದ್ಯೋಗಿ ನಗರದ ಸಿಎನ್‌ಎನ್ ಠಾಣೆಗೆ ದೂರು ನೀಡಿದ್ದಾರೆ.