ವರ್ಷದಲ್ಲೇ ಪ್ರಥಮ ಬಾರಿ ಪೆಟ್ರೋಲ್ 18 ಪೈಸೆ, ಡೀಸೆಲ್ 17 ಪೈಸೆ ಇಳಿಕೆ!

Update: 2021-03-24 12:22 GMT

ಹೊಸದಿಲ್ಲಿ: ಜಾಗತಿಕ ಕಚ್ಚಾ ತೈಲ ದರವು ತೀವ್ರವಾಗಿ ಕುಸಿದ ನಂತರ 2021 ರಲ್ಲಿ ಮೊದಲ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕಡಿತಗೊಳಿಸಲಾಯಿತು. ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿ) ಬುಧವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕ್ರಮವಾಗಿ 18 ಪೈಸೆ ಮತ್ತು 17 ಪೈಸೆ ಕಡಿತಗೊಳಿಸಿವೆ ಎಂದು ತಿಳಿದು ಬಂದಿದೆ.

ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳು ಮತ್ತು ಕೆಲವು ದೇಶಗಳಲ್ಲಿ ಲಾಕ್ ‌ಡೌನ್‌ ಅನ್ನು ಮರು ಪ್ರಾರಂಭಿಸುತ್ತಿರುವ ಮಧ್ಯೆ ಜಾಗತಿಕ ಕಚ್ಚಾ ತೈಲ ಬೆಲೆಗಳು ತೀವ್ರವಾಗಿ ಕುಸಿದಿವೆ ಎಂದು ವರದಿಗಳು ತಿಳಿಸಿವೆ.

ಇಂದಿನ ಕಡಿತದ ನಂತರ, ದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 90.99 ರೂ., ಕೋಲ್ಕತಾ (ರೂ. 91.18), ಮುಂಬೈ (ರೂ. 97.40), ಚೆನ್ನೈ (ರೂ. 92.95), ಬೆಂಗಳೂರು (ರೂ. 94.04), ಹೈದರಾಬಾದ್ (ರೂ. 94.61) ಮತ್ತು ಜೈಪುರ (97.56 ರೂ) ಸೇರಿದಂತೆ ಇತರ ಪ್ರಮುಖ ನಗರಗಳಲ್ಲಿಯೂ ಪೆಟ್ರೋಲ್ ದರ ಕಡಿಮೆಯಾಗಿದೆ.

ಏತನ್ಮಧ್ಯೆ, ದೆಹಲಿಯಲ್ಲಿ ಡೀಸೆಲ್ ಬೆಲೆ ನಿನ್ನೆಗಿಂತ 17 ಪೈಸೆ ಇಳಿಕೆಯಾಗಿ 81.30 ರೂ.ಗೆ ಇಳಿದಿದೆ. ಕೋಲ್ಕತಾ (ರೂ. 84.18), ಮುಂಬೈ (ರೂ. 88.42), ಚೆನ್ನೈ (ರೂ. 86.29), ಜೈಪುರ (ರೂ. 89.84), ಬೆಂಗಳೂರು (ರೂ. 86.21) ಮತ್ತು ಹೈದರಾಬಾದ್ (ರೂ. 88.67) ಸೇರಿದಂತೆ ಇತರ ಪ್ರಮುಖ ನಗರಗಳಲ್ಲಿ ದರದಲ್ಲಿ ಕೊಂಚ ವ್ಯತ್ಯಾಸ ಕಂಡು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News