ಯುವ ಕಾಂಗ್ರೆಸ್ ಬಲಿಷ್ಠ ಯುವ ಸಂಘಟನೆ: ಚೇತನ್ ದೊರೆರಾಜ್
ಕೊಳ್ಳೇಗಾಲ: ಯುವ ಕಾಂಗ್ರೆಸ್ ಅತಿದೊಡ್ಡ ಬಲಿಷ್ಠ ಯುವ ಸಂಘಟನೆಯಾಗಿದೆ. ದೇಶದ ಅಭಿವೃದ್ಧಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಚೇತನ್ ದೊರೆರಾಜ್ ತಿಳಿಸಿದರು.
ಪಟ್ಟಣದ ಪ್ರತಿಕಾ ಕಾರ್ಯಾಲಯದಲ್ಲಿ ಬುಧವಾರ ಕರೆದಿದ್ದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಳೆದ ತಿಂಗಳು ನಡೆದ ರಾಜ್ಯ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಜಯಗಳಿಸಿ ರಾಜ್ಯ ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿಯಾಗಿ ಚುನಾಯಿತನಾಗಿದ್ದೇನೆ. ಕಾಂಗ್ರೆಸ್ ಪಕ್ಷದ ಆಧಾರಸ್ತಂಭವಾಗಿರುವ ಯುವ ಕಾಂಗ್ರೆಸ್ ನಲ್ಲಿ ನನಗೆ ರಾಜ್ಯ ಮಟ್ಟದ ಅಧಿಕಾರ ಸಿಗಲು ಕಾರಣಕರ್ತರಾದ ಪಕ್ಷದ ಮುಖಂಡರು ಹಾಗೂ ಯುವಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಕಳೆದ 13 ವರ್ಷದಿಂದ ಪಕ್ಷದ ವಿವಿಧ ಸ್ಥಾನಗಳಲ್ಲಿ ಗುರುತಿಸಿಕೊಂಡು ತಳಮಟ್ಟದಲ್ಲಿ ತಾಲ್ಲೂಕು ಹಾಗೂ ಜಿಲ್ಲಾದ್ಯಂತ ಯುವಕರ ಸಂಘಟಿಸಿ ಕಾಂಗ್ರೆಸ್ ಪಕ್ಷದ ಜನನೂರಾಗಿ ಆಡಳಿತದ ಬಗ್ಗೆ ಜಾಗೃತಿ ಮುಡಿಸಿದ್ದೇನೆ. ಡಿ.ಎಲ್ ಕ್ಯಾಂಪ್, ಉದ್ಯೋಗ ಮೇಳ, ಉಚಿತ ಕಣ್ಣಿನ ಶಿಬಿರ ಹಾಗೂ ಯುವಕರ ಎಚ್ಚರಿಸುವ ಹಲವು ಕಾರ್ಯಕ್ರಮಗಳನ್ನು ಮಾಡುತ್ತ ಪಕ್ಷದ ಬಲವರ್ಧನೆ ಶ್ರಮಿಸುತ್ತಿದ್ದೇನೆ.
ನನ್ನ ತಂದೆ ದಿ. ಎನ್.ದೊರೆರಾಜ್ ಅವರು 1979- 80 ರ ಸಾಲಿನಲ್ಲಿ ಯುವ ಕಾಂಗ್ರೆಸ್ ನ ಜಿಲ್ಲಾಧ್ಯಕ್ಷರಾಗಿದ್ದರು. ಯುವ ಕಾಂಗ್ರೆಸ್ ನಿಂದ ಅವರ ರಾಜಕೀಯ ಪಯಾಣ ಪ್ರಾರಂಭವಾಗಿತ್ತು. ಅದರಂತೆ ರಾಜಕಾರಣದಲ್ಲಿ ನಾನು ಸಹ ಜನ ಸೇವೆ ಮಾಡಲು ಮುಂದಾದ್ದೇನೆ ಎಂದು ತಿಳಿಸಿದರು.
ವಿದ್ಯಾರ್ಥಿ ನಾಯಕನಾಗಿ ಪ್ರಾರಂಭವಾದ ನನ್ನ ರಾಜಕಾರಣಕ್ಕೆ ಮಾಜಿ ಸಂಸದರಾದ ಧೃವನಾರಾಯಣ್, ಶಾಸಕ ನರೇಂದ್ರ, ಮಾಜಿ ಸಚಿವೆ ಗೀತಾ ಮಹದೇವ ಪ್ರಸಾದ್, ಮಾಜಿ ಶಾಸಕ ಜಯಣ್ಣ, ಎ.ಆರ್. ಕೃಷ್ಣ ಮೂರ್ತಿ ಹಾಗೂ ಬಾಲರಾಜು ಸೇರಿದಂತೆ ಹಲವು ನಾಯಕರ ಮಾರ್ಗದರ್ಶನ ನನಗಿದೆ ಎಂದು ತಿಳಿಸಿದರು.
ಪಕ್ಷದ ಸಂಘಟನೆಗೆ ಕಳೆದ 13 ವರ್ಷಗಳಿಂದಲೂ ನಿರಂತರವಾಗಿ ಪ್ರಮಾಣಿಕವಾಗಿ ದುಡಿದಿದ್ದೇನೆ. ಇನ್ನೂ ಮುಂದೆನೂ ಸಹಾ ಪಕ್ಷಕ್ಕಾಗಿ ದುಡಿಯುವ ಮೂಲಕ ಕಾಂಗ್ರೇಸ್ ರಾಜ್ಯದಲ್ಲಿ ಮತ್ತೆ ಅಧಿಕಾರ ಹಿಡಿಯಲು ಸಂಘಟನೆಗೆ ವರಿಷ್ಢರ ಜೊತೆ ದುಡಿಯುವುದಾಗಿ ಹೇಳಿದರು.
ಕಾಂಗ್ರೆಸ್ ಪಕ್ಷದಿಂದ ಮುಂಬರುವ ಜಿ.ಪಂ ಚುನಾವಣೆಗೆ ಸ್ಪರ್ಧಿಸಲು ಇಚ್ಛಿಸಿದ್ದೇನೆ. ಹಲವು ಕಾಂಗ್ರೆಸ್ ಮುಖಂಡರ ಆಶಯಯವೂ ನನ್ನ ನಿರ್ಧಾರಕ್ಕೆ ಕಾರಣವಾಗಿದೆ. ಕೊಳ್ಳೇಗಾಲ ಹಾಗೂ ಹನೂರು ಬ್ಲಾಕ್ ವ್ಯಾಪ್ತಿಯ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರಕ್ಕೆ ಪ್ರಬಲ ಆಕಾಂಕ್ಷಿಯಾಗಿದ್ದೇನೆ. ಹನೂರು ಮತ್ತು ಕೊಳ್ಳೇಗಾಲ ಕಾಂಗ್ರೆಸ್ ನಾಯಕರ ಆಶೀರ್ವಾದದೊಂದಿಗೆ ಸ್ಪರ್ಧಿಸಲಿದ್ದೇನೆ ಎಂದು ಪ್ರಶ್ನೆಗೆ ಉತ್ತರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವು ಸರಗೂರು, ಗ್ರಾ.ಪಂ ಸದಸ್ಯ ಮಲ್ಲೇಶ್ ಸತ್ತೇಗಾಲ, ಹನೂರು ಯುವ ಕಾಂಗ್ರೆಸ್ ಅಧ್ಯಕ್ಷ ರಾಯಿಲ್ ಬೇಗ್, ನಿಕಟಪೂರ್ವ ಅಧ್ಯಕ್ಷ ಮಾದೇಶ್, ಸಾಮಾಜಿಕ ಜಾಲಾತಾಣದ ಉಸ್ತುವಾರಿ ಶಾಂತರಾಜು, ಕಾಂಗ್ರೆಸ್ ಮುಖಂಡ, ಸ್ವಾಮಿ ನಂಜಪ್ಪ, ವಿನಯ್, ಕೆಂಪರಾಜು, ಶಿವಕುಮಾರ್, ಶಾಂತರಾಜು. ವಿನೋದ್, ಹರ್ಷ ಸುರೇಶ್ ಇತರರು ಇದ್ದರು.