×
Ad

‘ನನಗಿರುವುದು ಒಬ್ಬಳೇ ಹೆಂಡತಿ, ಒಂದೇ ಸಂಸಾರ’: ಸಚಿವ ಸುಧಾಕರ್ ಗೆ ಡಿ.ಕೆ.ಶಿವಕುಮಾರ್ ತಿರುಗೇಟು

Update: 2021-03-24 20:22 IST
ಡಾ.ಕೆ.ಸುಧಾಕರ್ / ಡಿ.ಕೆ.ಶಿವಕುಮಾರ್

ಬೆಂಗಳೂರು, ಮಾ.24: ನನಗಿರುವುದು ಒಬ್ಬಳೇ ಹೆಂಡತಿ, ಒಂದೇ ಸಂಸಾರ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಚಿವ ಡಾ.ಕೆ.ಸುಧಾಕರ್ ಹೇಳಿಕೆಗೆ ತಿರುಗೇಟು ಕೊಟ್ಟಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯದ 225 ಶಾಸಕರ ಅನೈತಿಕ ಸಂಬಂಧದ ಬಗ್ಗೆ ತನಿಖೆಯಾಗಲಿ. ತನಿಖೆಯಾದ್ರೆ ಎಲ್ಲರ ಬಂಡವಾಳ ಜನಕ್ಕೆ ತಿಳಿಯುತ್ತದೆ. ನಾನು ಒಪನ್ ಆಗಿ ಚಾಲೆಂಜ್ ಮಾಡುತ್ತಿದ್ದೇನೆ. ಏನೇ ಬಂದರೂ ನಾನು ಎದುರಿಸಲು ಸಿದ್ಧವಾಗಿದ್ದೇನೆ’ ಎಂದರು.

‘ಬಹಳ ಸಂತೋಷ, ಸುಧಾಕರ್ ಅವರು ಇಂತಹ ನುಡಿಮುತ್ತುಗಳನ್ನು ಇಡೀ ರಾಜ್ಯಕ್ಕೆ ಕೊಟ್ಟಿದ್ದಾರೆ. ಇದು ಇಲ್ಲಿ ಚರ್ಚೆ ಮಾಡುವ ವಿಚಾರವಲ್ಲ, ಸದನದಲ್ಲಿ ಚರ್ಚೆ ಮಾಡಬೇಕು. ಈ ಬಗ್ಗೆ ನಮ್ಮ ನಾಯಕರ ಜತೆ ಮಾತನಾಡುತ್ತೇನೆ. ಇದು ಸಾಮೂಹಿಕ ವಿಚಾರ’ ಎಂದು ಶಿವಕುಮಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News