×
Ad

ಹಿರೇಮಗಳೂರು: ರಾಜ್ಯಮಟ್ಟದ ಜೋಡೆತ್ತಿನ ಗಾಡಿ ಸ್ಪರ್ಧೆ

Update: 2021-03-24 22:04 IST

ಚಿಕ್ಕಮಗಳೂರು, ಮಾ.24: ಕ್ರೀಡಾಯುಗದಲ್ಲಿ ಗ್ರಾಮೀಣ ಕ್ರೀಡೆಗಳನ್ನು ಮರೆಯದೆ ಯುವಸಮೂಹ ಹೆಚ್ಚಾಗಿ ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸುವುದರ ಜೊತೆಗೆ ರೈತಾಪಿ ವರ್ಗದ ಜೋಡಿ ಎತ್ತಿನಗಾಡಿ ಸ್ಪರ್ಧೇಯನ್ನು ಆಯೋಜಿಸಿ ಅತ್ಯಂತ ಜಾಗೃತವಾಗಿ ನಡೆಸಬೇಕೆಂದು ನಗರಸಭೆ ಮಾಜಿ ಅಧ್ಯಕ್ಷ ಎಚ್.ಡಿ.ತಮ್ಮಯ್ಯ ತಿಳಿಸಿದರು. 

ಅವರು ಬುಧವಾರ ಹಿರೇಮಗಳೂರಿನ ಕೋದಂಡರಾಮಚಂದ್ರಸ್ವಾಮಿ ರಥೋತ್ಸವದ ಪ್ರಯುಕ್ತ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಲ್‍ಬಳಿ ಜೋಡಿಎತ್ತಿನ ಗಾಡಿ ಓಟದ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತ ಹಳ್ಳಿಗಳ ನಾಡಾಗಿದ್ದು ಗ್ರಾಮೀಣ ಭಾಗದ ಕ್ರೀಡೆಗಳನ್ನು ಪ್ರೋತ್ಸಾಹಿಸಿ ಬೆಳೆಸುವ ನಿಟ್ಟಿನಲ್ಲಿ ಜೋಡೆತ್ತಿನ ಗಾಡಿ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದೆ ದೇಶದಲ್ಲಿ ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಯುವಸಮೂಹ ಜಿಲ್ಲಾದ್ಯಂತ ಗ್ರಾಮೀಣ ಕ್ರೀಡೆಗಳನ್ನು ಹೆಚ್ಚಾಗಿ ಆಯೋಜನೆ ಮಾಡಬೇಕು ಜೋಡಿ ಎತ್ತಿನ ಗಾಡಿ ಓಟದ ಸ್ಪರ್ಧೆಯನ್ನು ಪ್ರತಿವರ್ಷ ಆಯೋಜಿಸಿಕೊಂಡು ಬರಲಾಗುತ್ತಿದೆ, ಈ ವರ್ಷದ ಆಯೋಜನೆ ಸ್ಪರ್ಧೆಗೆ ರಾಜ್ಯದ ವಿವಿಧ ಜಿಲ್ಲೆಗಳು ಸೇರಿದಂತೆ ನಾನಾ ಮೂಲೆಗಳಿಂದ ರೈತಾಪಿ ವರ್ಗವು ರಾಸುಗಳೊಂದಿಗೆ ಆಗಮಿಸಿ ಸ್ಪರ್ಧಿಸಿದ್ದಾರೆ ಎಂದರು.

ಸ್ಪರ್ಧೆಯಲ್ಲಿ ಲಕ್ಷಾಂತರ ಮೌಲ್ಯದ ರಾಸುಗಳಿದ್ದು, ಮೈಸೂರು, ಧಾರಾವಾಡ, ತರೀಕೆರೆ ಸೇರಿದಂತೆ ವಿವಿಧ ಭಾಗದಿಂದಲೂ ಸ್ಪರ್ಧಾಲುಗಳು ರಾಸುಗಳೊಂದಿಗೆ ಬಂದಿದ್ದು ವಿಜೇತರಾದವರಿಗೆ ಮೊದಲ ಬಹುಮಾನವಾಗಿ ರೂ.50 ಸಾವಿರ ಮತ್ತು ಆಕರ್ಷಕ ಟ್ರೋಫಿ ಹಾಗೂ ದ್ವಿತೀಯ ಬಹುಮಾನವಾಗಿ ರೂ.30 ಸಾವಿರ ಮತ್ತು ತೃತೀಯ 20 ಸಾವಿರ ನಾಲ್ಕನೇ ಬಹುಮಾನವಾಗಿ ರೂ.10 ಸಾವಿರ ನೀಡಲಾಗುವುದು. ಕೋವಿಡ್-19 ಸುರಕ್ಷತಾ ಕ್ರಮ ಕೈಗೊಂಡು ಸ್ಪóರ್ಧೆ ಆಯೋಜಿಸಲಾಗಿದೆ ಎಂದರು.

ನಗರಸಭೆ ಮಾಜಿ ಸದಸ್ಯ ದಂಟಕಮುಕ್ಕಿ ನಟರಾಜ್ ಮಾತನಾಡಿ ಹಳ್ಳಿಗಳ ನಾಡು ನಮ್ಮದಾಗಿದ್ದು ಕ್ರೀಡೆಗಳ ಪ್ರೋತ್ಸಾಹದ ಉದ್ದೇಶದಿಂದ ಹಿರೇಮಗಳೂರಿನ ಯುವಕರು ಮತ್ತು ಗ್ರಾಮಸ್ಥರು, ಜೋಡಿ ಎತ್ತಿನ ಗಾಡಿ ಸ್ಪರ್ದೇ ಆಯೋಜಿಸಿದ್ದಾರೆ, ಈ ಬಾರಿಯಲ್ಲಿ ರಾಜ್ಯದ ವಿವಿಧ ಮೂಲೆಗಳಿಂದ ಸ್ಪರ್ಧಾಳು ರಾಸುಗಳೊಂದಿಗೆ ಆಗಮಿಸಿದ್ದಾರೆ ಎಂದರು.

ನಗರಸಭೆ ಮಾಜಿ ಸದಸ್ಯ ಜಾನಯ್ಯ ಮಾತನಾಡಿ, ರೈತ ದೇಶದ ಬೆನ್ನೆಲುಬು ಆರ್ಥಿಕವಾಗಿ ಸದೃಢರಾಗಲು ಇಂತಹ ಕ್ರೀಡೆಗಳು ಸಹಕಾರಿಯಾಗಲಿದೆ. ಸ್ಪರ್ಧೆ ರೋಮಾಂಚನಕಾರಿಯಾಗಿದ್ದು ನೋಡಲು ವಿವಿದೆಡೆಯಿಂದ ಜನರು ಆಗಮಿಸಿದ್ದಾರೆ, ಆಯೋಜಕರು ಯಾವುದೆ ಗೊಂದಲ ಮಾಡಿಕೊಳ್ಳದೆ ಕ್ರೀಡೆಯನ್ನು ನೆಡೆಸಬೇಕು ಎಂದರು.

ಈ ಸಂದರ್ಭದಲ್ಲಿ ನಗರಸಭೆ ಮಾಜಿ ಸದಸ್ಯ ಮುತ್ತಯ್ಯ, ಹಿರೇಮಗಳೂರು ಕೃಷಿ ಪತ್ತಿನ ಸಹಕಾರ ಸಂಘದ ಯೋಗೀಶ್, ನವಚೇತನ ಯುವಕಸಂಘದ ಅಧ್ಯಕ್ಷರಾದ ಬಿ.ರೇವನಾಥ್, ನೌಕರಸಂಘದ ಮಾಜಿ ಅಧ್ಯಕ್ಷ ಗೋಪಾಲ್, ಕಲ್ಯಾಣ್ ನಗರದ ಬಿಜೆಪಿ ಮುಖಂಡ ಜಗಧೀಶ್, ಹಿರೇಮಗಳೂರು ಗ್ರಾಮಸ್ಥರಾದ ಹೆಚ್.ಎಸ್.ಜಗದೀಶ್, ಕೇಶವ್, ತಾರೇಶ್, ಚಂದ್ರು, ಕಾಂತರಾಜ್, ಹೆಚ್.ಪಿ.ಸಂಜಯ್, ನಂದನ್, ವಸಂತ, ಸುನೀಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News