ಮುದ್ರಾಂಕ ಶುಲ್ಕದಲ್ಲಿ ನಷ್ಟ ಕಂಡು ಬಂದರೆ ಅಧಿಕಾರಿಗಳ ಅಮಾನತ್ತಿಗೆ ಆದೇಶ: ಆರ್.ಅಶೋಕ್

Update: 2021-03-24 17:57 GMT

ಬೆಂಗಳೂರು, ಮಾ.24: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅನುಮೋದಿಸಿದ ಬಡಾವಣೆ ಪ್ರದೇಶ ಮಾರಾಟ ಪತ್ರಗಳ ನೋಂದಣಿಯಿಂದ 103.39 ಕೋಟಿ ರೂ.ಮುದ್ರಾಂಕ ಶುಲ್ಕ ನಷ್ಟ ಮಾಡಿರುವುದು ಕಂಡು ಬಂದರೆ ಅಂತಹ ಅಧಿಕಾರಿಗಳನ್ನು ಅಮಾನತು ಮಾಡಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ. 

ಬುಧವಾರ ವಿಧಾನ ಪರಿಷತ್ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಎನ್.ರವಿಕುಮಾರ್ ಪ್ರಶ್ನೆಗೆ ಸಚಿವರು ಉತ್ತರಿಸಿದರು. 

2013-2018ರ ಸಾಲಿನಲ್ಲಿ ಕಾವೇರಿಪುರ, ಮಾರುತಿ ನಗರ, ಮೀನಾಕ್ಷಿನಗರ, ರಂಗನಾಥಪುರ ಮತ್ತು ಸಣ್ಣಕ್ಕಿ ಬಯಲು ಈ ಪ್ರದೇಶಗಳಲ್ಲಿ ಕ್ರಯಪತ್ರಗಳಾಗಿರುತ್ತವೆ. ಅಲ್ಲದೆ, ಅಧಿಕಾರಿಗಳೂ ದರಕ್ಕಿಂತ ಕಡಿಮೆ ದರಕ್ಕೆ ನೋಂದಣಿ ಮಾಡಲು ಅನುಮತಿ ನೀಡಿರುವುದಿಲ್ಲ. ಹಾಗೊಂದು ಬಾರಿ ಮುದ್ರಾಂಕ ಶುಲ್ಕ ನಷ್ಟ ಮಾಡಿರುವುದು ಕಂಡು ಬಂದರೆ ಅಂತಹ ಅಧಿಕಾರಿಗಳನ್ನು ನಿಯಮಾನುಸಾರ ಅಮಾನತು ಮಾಡಲಾಗುವುದು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News