ಮುಸ್ಲಿಂ ಜಮಾಅತ್ ಕುಷ್ಟಗಿ ತಾಲೂಕು ಸಮಿತಿ ಅಸ್ತಿತ್ವಕ್ಕೆ
ಕುಷ್ಟಗಿ, ಮಾ.25: ಕರ್ನಾಟಕ ಮುಸ್ಲಿಂ ಜಮಾಅತ್ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕು ಸಮಿತಿ ರಚನಾ ಸಮಾವೇಶವು ಇಂದು ನಡೆಸಿದ್ದು, ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಪ್ರಧಾನ ಕಾರ್ಯದರ್ಶಿ, ರಾಜ್ಯ ವಕ್ಫ್ ಬೋರ್ಡ್ ಸದಸ್ಯ, ಇಹ್ಸಾನ್ ಕರ್ನಾಟಕ ಅಧ್ಯಕ್ಷರೂ ಆದ ಮೌಲಾನಾ ಶಾಫಿ ಸಅದಿ ಬೆಂಗಳೂರು ಸಮಿತಿಯನ್ನು ಫೋಷಿಸಿದರು.
ಕೊಪ್ಪಳ ಜಿಲ್ಲಾ ಮುಸ್ಲಿಂ ಜಮಾಅತ್ ಅಧ್ಯಕ್ಷ ಎಂ.ಪಾಷ ಕಾಟನ್ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಶಿವಮೊಗ್ಗ ಜಿಲ್ಲಾ ಮುಸ್ಲಿಂ ಜಮಾಅತ್ ಸಂಘಟನಾ ಕಾರ್ಯದರ್ಶಿ ಮೌಲಾನಾ ಶಾಹುಲ್ ಹಮೀದ್ ಉದ್ಘಾಟಿಸಿದರು.
ರಾಜ್ಯ ಮುಸ್ಲಿಂ ಜಮಾಅತ್ ಸದಸ್ಯರೂ ಉಡುಪಿ ಜಿಲ್ಲಾ ಕಾರ್ಯದರ್ಶಿ ಕೆ ಎ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ, ಮುಸ್ಲಿಂ ಜಮಾಅತ್ ರಾಜ್ಯ ನಾಯಕ ಮೌಲಾನಾ ಬಿ.ಎ ಇಬ್ರಾಹಿಂ ಸಖಾಫಿ ದಾವಣಗೆರೆ, ಅಂಜುಮನ್ ಸಮಿತಿ ಅಧ್ಯಕ್ಷ ಶೇಖ್ ಜವ್ವಾದ್, ಉಮರಾ ನಾಯಕರಾದ ಲಾಡ್ಲೇ ಮಶಾಕ್, ಮುರ್ತುಜಾ ಖಾದ್ರಿ, ಸಲೀಂ ಅಳವಂಡಿ, ಮುರ್ತುಜಾ ಪೇಂಟರ್, ನಜೀರ್ ಸಾಬ್ ಮೂಲಿಮನಿ, ನದೀಮ್, ಮುಜೀಬ್ ಉರ್ ರಹಮಾನ್,
ಲಾಡ್ಲೇ ಮಶಾಕ್, ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿ ಸದಸ್ಯ ಅಬ್ದುರ್ರಹ್ಮಾನ್ ಸುಳ್ಯ ಮಂಗಳೂರು, ಕೊಳ್ಳಿ ಮಹೇಬೂಬ್, ಫಾರೂಕ್, ಜಿಲಾನ್, ಇಮ್ರಾನ್ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.