ಕಲಬುರಗಿ ಬಂದ್ : 30ಕ್ಕೂ ಹೆಚ್ಚು ಪ್ರತಿಭಟನಾಕಾರರ ಬಂಧನ

Update: 2021-03-26 09:06 GMT

ಕಲಬುರಗಿ: ನೂತನ ಕಾಯ್ದೆಗಳ ವಿರುದ್ಧ ಇಂದು ಸಂಯುಕ್ತ ಕಿಸಾನ್ ಮೋರ್ಚಾ ಭಾರತ್ ಬಂದ್ ಗೆ ಕರೆ ನೀಡಿದ್ದು, ಕಲಬುರಗಿಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾದಿಂದ ಜಿಲ್ಲಾ ಸಮಿತಿ ಬೆಂಬಲವಾಗಿ ಕಲಬುರಗಿ ಜಿಲ್ಲೆಯಿಂದ ವಿವಿಧ ಸಂಸ್ಥೆ ಕಚೇರಿಗಳ ಸ್ಥಳಾಂತರ ವಿರೋಧಿಸಿ ಬಂದ್ ಕರೆ ನೀಡಿ ಹೋರಾಟ ನಡೆಸುತ್ತಿದ್ದ ವಿವಿಧ ಸಂಘಟನೆಗಳ ಸುಮಾರು 30ಕ್ಕೂ ಹೆಚ್ಚು ಹೋರಾಟಗಾರರನ್ನು ಬಂಧಿಸಿದ್ದಾರೆ.

ಕಲಬುರಗಿ ಬಂದ್​ಗೆ ಅನುಮತಿ ನೀಡದ ಪೊಲೀಸರು, ಅನುಮತಿ ಇಲ್ಲದೇ ಪ್ರತಿಭಟನೆ ನಡೆಸಿದ ಹಿನ್ನೆಲೆ ರೈತರ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ. ಬಂಧನ ಕುರಿತು ಪ್ರತಿಕ್ರಿಯೆ ನೀಡಿರುವ ಹೋರಾಟಗಾರರು, ಈ ಬಂಧನ ಖಂಡನಾರ್ಹ, ಹೋರಾಟ ಹತ್ತಿಕ್ಕುವ ಸಂಚು ಕೇಂದ್ರ ಮತ್ತು ರಾಜ್ಯ ಸರ್ಕಾರ ನಡೆಸುತ್ತಿವೆ ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಉಪಚುನಾವಣೆಗಳಿಗೆ ಕೋವಿಡ್ ಸಮಸ್ಯೆ ಎದುರಾಗಲ್ಲಾ ಅದರ ಬಗ್ಗೆ ನೂರಾರು ಜನ ಗುಂಪಾಗಿ ಪ್ರಾಚಾರ ಬಹಿರಂಗ ಸಭೆ ಸಮಾರಂಭಗಳು ನಡೆಸುತ್ತಾರೆ. ಆದರೆ ಬಂಧನ ಮಾಡಿ ಹೋರಾಟ ಹತ್ತಿಕ್ಕುವ ಸಂಚಿಗೆ ಬಗ್ಗುವದಿಲ್ಲ. ಮುಂದಿನ ದಿನಗಳಲ್ಲಿ ಉಗ್ರ ಸ್ವರೂಪದ ಹೋರಾಟಕ್ಕೆ ಸಜ್ಜಾಗಲು ಕರೆ ನೀಡುವುದಾಗಿ ಸಂಯುಕ್ತ ಕಿಸಾನ್ ಮೋರ್ಚಾದ ಸಂಚಾಲಕರಾದ ಶರಣ ಬಸಪ್ಪ  ತಿಳಿಸಿದ್ದಾರೆ.

ಈ ಸಂದರ್ಭ ಶರಣ ಬಸಪ್ಪಾ ಮಮಶೆಟ್ಟಿ, ನಿಲಾ ಕೆ, ಎಸ್ ಆರ್ ಕೊಲ್ಲೂರು, ಮೌಲಾ ಮುಲ್ಲಾ, ಭಿಮಶೆಟ್ಟಿ ಯಂಪಳ್ಳಿ, ಮಹೆಷ ಎಸ್ ಬಿ, ಎಸ್ ಎಮ್ ಶರ್ಮಾ, ಆರ್ ವಿ ದೆಸಾಯಿ, ಸುಧಾಮ ಧನ್ನಿ, ಅರ್ಜುನ ಗೊಬ್ಬುರ, ಜಗದೇವಿ ಚಂದನಕೆರಿ, ಜಗದೇವಿ ನೂಲಕರ, ಅಮಿನಾ ಬೇಗಂ, ಶೌಕತ್ ಅಲಿ ಆಲೂರ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News