ಹೊಸ ತಾಲೂಕುಗಳಿಗೆ 1.35 ಕೋಟಿ ರೂ. ಬಿಡುಗಡೆ
Update: 2021-03-26 22:08 IST
ಬೆಂಗಳೂರು, ಮಾ. 26: ರಾಜ್ಯದಲ್ಲಿ ಹೊಸದಾಗಿ ರಚಿಸಲಾಗಿರುವ ತಾಲೂಕುಗಳ ಕಾರ್ಯಾರಂಭಕ್ಕೆ ಕೊಡಗು ಜಿಲ್ಲೆಯಲ್ಲಿ ನೂತನವಾಗಿ ರಚನೆಯಾಗಿರುವ ಕುಶಾಲನಗರ ತಾಲೂಕಿಗೆ 10 ಲಕ್ಷ ರೂ. ಸೇರಿದಂತೆ 54 ತಾಲೂಕುಗಳಿಗೆ ಆಡಳಿತಾತ್ಮಕ ಮತ್ತು ಇತರೆ ಖರ್ಚುಗಳನ್ನು ಭರಿಸಲು ಪ್ರತಿ ತಾಲೂಕಿಗೆ 2.50 ಲಕ್ಷ ರೂ.ಗಳಂತೆ 1.35 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿ ಕಂದಾಯ ಇಲಾಖೆ ಆದೇಶ ಹೊರಡಿಸಿದೆ.