×
Ad

94 ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ನೇರ ನೇಮಕಾತಿಗೆ ಅರ್ಜಿ ಆಹ್ವಾನ

Update: 2021-03-26 23:07 IST

ಬೆಂಗಳೂರು, ಮಾ. 26: ಹೈಕೋರ್ಟ್‍ನಲ್ಲಿ ಖಾಲಿ ಇರುವ ಒಟ್ಟು 94 ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ನೇರ ನೇಮಕಾತಿಗಾಗಿ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲು ಕರ್ನಾಟಕ ರಾಜ್ಯಪತ್ರ ಪ್ರಕಟಿಸಲಾಗಿದ್ದು, ಅರ್ಜಿ ಸಲ್ಲಿಸಲು 2021ರ ಎಪ್ರಿಲ್ 27 ಕೊನೆಯ ದಿನವಾಗಿದೆ.

ನೇರ ನೇಮಕಾತಿಗೆ ಭಾರತೀಯ ಕಾನೂನಿನ ಮೂಲಕ ಸ್ಥಾಪಿತವಾದ ವಿವಿ ನೀಡಿದ ಕಾನೂನು ಪದವಿ ಪಡೆದಿರಬೇಕು. ಅಭ್ಯರ್ಥಿ ಅರ್ಜಿ ಸಲ್ಲಿಸಲು ಎಸ್ಸಿ-ಎಸ್ಟಿಗಳಿಗೆ 38 ಹಾಗೂ ಇತರೆಯವರಿಗೆ 35 ವರ್ಷ, ಮಾಜಿ ಸೈನಿಕರಿಗೆ ಗರಿಷ್ಠ ವಯೋಮಿತಿಯಲ್ಲಿ ಮೂರು ವರ್ಷ ಸಡಿಲಿಕೆ ಇರುತ್ತದೆ.

ಸೇವಾನಿರತ ಅಭ್ಯರ್ಥಿಗಳು ಹೈಕೋರ್ಟ್, ಜಿಲ್ಲಾ ನ್ಯಾಯಿಕ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಮತ್ತು ಪ್ರಾಸಿಕ್ಯೂಷನ್ಸ್, ಹೆಚ್ಚುವರಿ ಸರಕಾರಿ ನ್ಯಾಯವಾದಿಗಳು ಕಾನೂನು ಪದವಿ ಪಡೆದಿರಬೇಕು. ಎಸ್ಸಿ-ಎಸ್ಟಿ ಅಭ್ಯರ್ಥಿಗಳಿಗೆ 43 ವರ್ಷ, ಇತರೆಯವರಿಗೆ 40 ವರ್ಷ ವಯಸ್ಸು ಮೀರಿರಬಾರದು.

ಸಾಮಾನ್ಯ-37, ಪರಿಶಿಷ್ಟ ಜಾತಿ-10, ಪರಿಶಿಷ್ಟ ಪಂಗಡ-3+1, ಪ್ರವರ್ಗ-1-3+10, ಪ್ರವರ್ಗ-2ಎ-11+4, ಪ್ರವರ್ಗ 2ಬಿ-3+3, ಪ್ರವರ್ಗ 3ಎ-3+2 ಪ್ರವರ್ಗ 3ಬಿ-4, ಮೀಸಲಾತಿ ವರ್ಗದವರು ಸೇರಿದಂತೆ ಮಹಿಳೆಯರಿಗೆ 23+6 ಸೇರಿದಂತೆ 94 ಹುದ್ದೆಗಳು ಎಂದು ಆದೇಶದಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News