×
Ad

ಯುವತಿಯ ಪೋಷಕರು, ರಮೇಶ್ ಜಾರಕಿಹೊಳಿ ಆರೋಪದ ಬಗ್ಗೆ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ

Update: 2021-03-27 18:49 IST

ತಮಿಳುನಾಡು, ಮಾ.27: ಅಶ್ಲೀಲ ಸಿಡಿ ಪ್ರಕರಣ ಸಂಬಂಧ ಯುವತಿಯ ಪೋಷಕರು, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಆರೋಪದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿಕವಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದು, ನನಗೂ ಆ ಪ್ರಕರಣಕ್ಕೂ ಯಾವ ಸಂಬಂಧವೂ ಇಲ್ಲ ಎಂದು ತಿಳಿಸಿದ್ದಾರೆ.

ಚುನಾವಣಾ ಪ್ರಚಾರಕ್ಕೆಂದು ತಮಿಳುನಾಡಿಗೆ ತೆರಳಿರುವ ಡಿ.ಕೆ.ಶಿವಕುಮಾರ್ ಕೃಷ್ಣಗಿರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. 'ಅವರ ಮಾತುಗಳಿಗೆಲ್ಲಾ ನಾನು ತಲೆಕಡಿಸಿಕೊಳ್ಳಲ್ಲ. ಅವರು ಮಾತಾಡುತ್ತಾರೆ ಎಂದು ಎಲ್ಲದಕ್ಕೂ ಉತ್ತರ ಕೊಡಕ್ಕಾಗಲ್ಲ' ಎಂದರು.

ಕಾನೂನು ಇದೆ, ಅಧಿಕಾರಿಗಳಿದ್ದಾರೆ. ವಿಚಾರಣೆ ಆಗಲಿ. ಸರಕಾರ ಏನು ಬೇಕಾದರೂ ಮಾಡಲಿ. ನಾನು ತಲೆಕೆಡಿಸಿಕೊಳ್ಳಲ್ಲ. ನನಗೂ ಆ ಪ್ರಕರಣಕ್ಕೂ ಯಾವ ಸಂಬಂಧವೂ ಇಲ್ಲ ಎಂದು ತಿಳಿಸಿದರು.

ಅವರ ವೈಯುಕ್ತಿಕ ಸಮಸ್ಯೆ ಅವರೇ ಬಗೆಹರಿಕೊಳ್ಳಲಿ. ಅವರು ಹತಾಶೆಯಲ್ಲಿ ಮಾತನಾಡುತ್ತಿದ್ದಾರೆ. ನಿನ್ನೆ ಒಂದು ಮಾತಾಡುತ್ತಾರೆ. ಇಂದು ಬೇರೆಯೇ ಮಾತಾಡುತ್ತಾರೆ. ಎಲ್ಲಾ ಆರೋಪಗಳಿಗೆ ಉತ್ತರಿಸಲು ಆಗಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News