×
Ad

ಡಿ.ಕೆ.ಶಿವಕುಮಾರ್ ಅಂತಹ ವ್ಯಕ್ತಿಯಲ್ಲ, ಅವರನ್ನು ನಾನು ಬಲ್ಲೆ: ಸಿಡಿ ಪ್ರಕರಣದ ಬಗ್ಗೆ ಸಚಿವ ಮಾಧುಸ್ವಾಮಿ

Update: 2021-03-27 20:07 IST

ಮೈಸೂರು,ಮಾ.27: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೆಸರು ತಳುಕು ಹಾಕಿಕೊಂಡಿರುವದರ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಜೆ.ಸಿ.ಮಾದುಸ್ವಾಮಿ, ಡಿ.ಕೆ.ಶಿವಕುಮಾರ್ ಅಂತಹ ವ್ಯಕ್ತಿಯಲ್ಲ ಅವರದ್ದೇನಿದ್ದರೂ ನೇರಾ ನೇರ ಎಂದು ಹೇಳುವ ಮೂಲಕ ಡಿ.ಕೆ.ಶಿವಕುಮಾರ್ ಪರ ಬ್ಯಾಟ್ ಬೀಸಿದರು.

ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ರನ್ನು ನಾನು ಬಲ್ಲೆ, ಅವರು ಅಂಥವರಲ್ಲ. ಆ ವ್ಯಕ್ತಿ ಇಂತಹ ಕೆಲಸಗಳಿಗೆ ಕೈ ಹಾಕುವವರಲ್ಲ. ಅವರದ್ದೇನಿದ್ದರೂ ನೇರಾನೇರ, ಗುಂಡು ಹೊಡೆದಂಗೆ ಎಂದು ಹೇಳಿದರು.

ಸಚಿವ ಸುಧಾಕರ್ ಅವರ ಏಕ ಪತ್ನಿವ್ರತಸ್ಥ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಮಾಧುಸ್ವಾಮಿ, ಸಚಿವ ಸುಧಾಕರ್ ಅವರು ಉದ್ವೇಗದಲ್ಲಿ ಆ ರೀತಿ ಹೇಳಿಕೆ ನೀಡಿದ್ದಾರೆ. ಅದನ್ನು ಅವರೇ ಸ್ಪಷ್ಟಪಡಿಸಿದ್ದಾರೆ. ಆ ಹೇಳಿಕೆಗೆ ಕ್ಷಮಾಪಣೆಯನ್ನೂ ಸಹ ಕೇಳಿದ್ದಾರೆ. ಅದನ್ನು ಮುಂದುವರಿಸುವ ಅವಶ್ಯಕತೆ ಇಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News