'ಸುಳ್ಳು ಹೇಳಿ ಯುವ ಜನರ ದಿಕ್ಕು ತಪ್ಪಿಸುತ್ತಾರೆ': ಶಿವಮೊಗ್ಗದಲ್ಲಿ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಗೋಬ್ಯಾಕ್ ಚಳವಳಿ

Update: 2021-03-27 16:04 GMT

ಶಿವಮೊಗ್ಗ, ಮಾ.27: ವಿಶೇಷ ಉಪನ್ಯಾಸ ನೀಡಲು ಶಿವಮೊಗ್ಗಕ್ಕೆ ಆಗಮಿಸಿದ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಜಿಲ್ಲಾ ಎನ್‌ಎಸ್‌ಯು‌ಐ ಕಾರ್ಯಕರ್ತರು ಗೋ ಬ್ಯಾಕ್ ಚಳವಳಿ ನಡೆಸಿದರು.

ನೆಹರು ಕ್ರೀಡಾಂಗಣದಲ್ಲಿ ಚಕ್ರವರ್ತಿ ಸೂಲಿಬೆಲೆ ಅವರ 'ಒಂದು ದೇಶ ಒಂದು ಚುನಾವಣೆ' ಎಂಬ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಹಿನ್ನಲೆಯಲ್ಲಿ ನೆಹರು ಕ್ರೀಡಾಂಗಣದ ಬಳಿ ಎನ್‌ಎಸ್‌ಯು‌ಐ ಕಾರ್ಯಕರ್ತರು ಗೋ ಬ್ಯಾಕ್ ಸೂಲಿಬೆಲೆ ಎಂದು ಘೋಷಣೆ ಕೂಗುವ ಮೂಲಕ ಪ್ರತಿಭಟನೆ ನಡೆಸಿದರು.

ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಅಲ್ಲದೆ ಚಕ್ರವರ್ತಿ ಸೂಲಿಬೆಲೆ ಅವರ ಭಾಷಣದ ವೇಳೆ ಹಲವು ಸುಳ್ಳುಗಳನ್ನು ಹೇಳಿ, ಯುವ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಾರೆ. ಆದ್ದರಿಂದ ಅವರ ಭಾಷಣಕ್ಕೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.

ಬಂಧನ: ನೆಹರು ಕ್ರೀಡಾಂಗಣಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಜಿಲ್ಲಾ ಎನ್‌ಎಸ್‌ಯು‌ಐ ಮುಖಂಡರಾದ ಚೇತನ್ ಗೌಡ, ಬಾಲಾಜಿ ಸೇರಿದಂತೆ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News