ಯುವತಿಯ ಹೊಟ್ಟೆಯಲ್ಲಿದ್ದ 8 ಕೆ.ಜಿ ಗೆಡ್ಡೆ ಹೊರತೆಗೆದ ಸಾಗರದ ಸರ್ಕಾರಿ ಆಸ್ಪತ್ರೆ ವೈದ್ಯರು

Update: 2021-03-27 18:11 GMT

ಸಾಗರ: ಸಾಗರದ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ 21 ವರ್ಷದ ಯುವತಿಯ ಹೊಟ್ಟೆಯಲ್ಲಿದ್ದ 8 ಕೆಜಿ ತೂಕದ ಗೆಡ್ಡೆಯನ್ನು ಹೊರ ತೆಗೆದಿದ್ದಾರೆ.

ತೀವ್ರವಾದ ಹೊಟ್ಟೆ ನೋವಿನಿಂದ ತೊಂದರೆ ಅನುಭವಿಸುತ್ತಿದ್ದ ಸೊರಬ ತಾಲೂಕಿನ ಯುವತಿಯು ಇತ್ತೀಚೆಗೆ ಹಿರಿಯ ಮಹಿಳಾ ವೈದ್ಯೆ ಪ್ರತಿಮಾ ಅವರನ್ನು ಸಂಪರ್ಕಿಸಿದ್ದರು. ಯುವತಿಯ ಅಂಡಾಶಯದಲ್ಲಿ ದೊಡ್ಡದಾದ, ಹಂತ ಹಂತವಾಗಿ ವಿಸ್ತರಿಸುತ್ತಿರುವ ಗೆಡ್ಡೆ ಇರುವುದು ಕಂಡುಬಂದಿತ್ತು. ಇದು ಆಕೆಗೆ ತೀವ್ರ ಹೊಟ್ಟೆ ನೋವು ಮತ್ತು ಜೀರ್ಣಕ್ರಿಯೆಗೆ ತೊಂದರೆಯಾಗಿತ್ತು.

ಸತತ ಎರಡು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಗೆಡ್ಡೆಯನ್ನು ಹೊರತೆಗೆಯಲಾಗಿದೆ ಎಂದು ವೈದ್ಯೆ ಪ್ರತಿಮಾ ವಿವರಿಸಿದ್ದಾರೆ. ಶಸ್ತ್ರಚಿಕಿತ್ಸೆ ನಂತರ ರೋಗಿ ಚೇತರಿಸಿಕೊಂಡಿದ್ದು, ಈ ಯಶಸ್ವಿ ಶಸ್ತ್ರಚಿಕಿತ್ಸೆಯಲ್ಲಿ ಸಿವಿಲ್ ಸರ್ಜಲ್ ಡಾ.ಪ್ರಕಾಶ್ ಬೋಸ್ಲೆ, ಆಸ್ಪತ್ರೆಯ ಸಿಬ್ಬಂದಿಗಳಾದ ರೀಟಾ, ರೋಹಿಣಿ, ಚಂದ್ರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News