×
Ad

ಸಕಲೇಶಪುರದಲ್ಲಿ ಧರ್ಮಗುರು ಮೇಲಿನ ಹಲ್ಲೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

Update: 2021-03-28 18:15 IST

ಸಕಲೇಶಪುರ, ಮಾ.28: ತಾಲೂಕಿನ ಸುಂಡೆಕೆರೆ ಗ್ರಾಮದ ಮಸೀದಿ ಧರ್ಮಗುರು ಮೇಲೆ ನಾಲ್ವರು ಕಿಡಿಗೇಡಿಗಳು ಹಲ್ಲೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ತೇಜ ಮತ್ತು ರಘು ಬಂಧಿತ ಅರೋಪಿಗಳಾಗಿದ್ದು, ಇನ್ನಿಬ್ಬರು ಅರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ.

ಇತ್ತೀಚಿಗೆ ಪ್ರಾರ್ಥನೆಗಾಗಿ ಮನೆಯಿಂದ ಮಸೀದಿಗೆ ತೆರಳುತ್ತಿದ್ದ ವೇಳೆ ಧರ್ಮಗುರು ಅಬ್ದುಲ್ ನಾಸಿರ್ ದಾರಿಮಿ ಅವರನ್ನು ಕಾರಿನಲ್ಲಿ ಹೊಂಚು ಹಾಕಿ ಕುಳಿತಿದ್ದ ನಾಲ್ಕು ಮಂದಿ ದಾರಿ ಮಧ್ಯೆ ತಡೆದು ನಿಂದಿಸಿ, ಹಲ್ಲೆ ನಡೆಸಿದ್ದರು. ಘಟನೆಗೆ ಸಂಬಂಧಿಸಿದಂತೆ ತಾಲೂಕಿನ ವಿವಿಧ ಸಂಘಟನೆಗಳ ಪ್ರಮುಖರು ಕಿಡಿಗೇಡಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News