×
Ad

ಹೋಳಿ ಆಚರಿಸಿ ಸ್ನಾನಕ್ಕೆಂದು ನದಿಗೆ ಇಳಿದಿದ್ದ ಇಬ್ಬರು ಬಾಲಕರು ನೀರುಪಾಲು

Update: 2021-03-28 21:26 IST
ಸಾಂದರ್ಭಿಕ ಚಿತ್ರ

ಹಾವೇರಿ, ಮಾ.28: ಹೋಳಿ ಹಬ್ಬದ ಹಿನ್ನೆಲೆ ಬಣ್ಣಗಳ ಜತೆ ಆಟವಾಡಿದ ಬಳಿಕ ಸ್ನಾನಕ್ಕೆಂದು ನದಿಗೆ ಇಳಿದಿದ್ದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಇಲ್ಲಿನ ಹಾವೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಹಾವೇರಿ ತಾಲೂಕಿನ ನಾನನೂರು ಬಳಿ ಈ ಘಟನೆ ನಡೆದಿದ್ದು, ಮೃತರನ್ನು ಮಹೇಶ್ ಮುಂಡನ್ನನವರ(10) ಹಾಗೂ ವೀರೇಶ್ ಅಕ್ಕಿವಳ್ಳಿ(10) ಎಂದು ಪೊಲೀಸರು ಗುರುತಿಸಿದ್ದಾರೆ.

ರವಿವಾರ ಬಣ್ಣಗಳ ಜತೆ ಆಟವಾಡಿದ ಬಳಿಕ ಮೂವರು ಬಾಲಕರು ಇಲ್ಲಿನ ವರದಾ ನದಿಗೆ ಸ್ನಾನಕ್ಕೆ ತೆರಳಿದಾಗ ನೀರಿನಲ್ಲಿ ಮುಳುಗಿದ್ದಾರೆ.  ಘಟನೆಯಲ್ಲಿ ಏಳು ವರ್ಷದ ಯೋಗೇಶ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸ್ಥಳೀಯರು ಬಾಲಕರ ಮೃತದೇಹಗಳನ್ನು ನದಿಯಿಂದ ಹೊರತೆಗೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News