ಹಾಸನ: ಪೋಷಕರ ಜೊತೆ ಮಲಗಿದ್ದ ಬಾಲಕಿಯನ್ನು ಹೊತ್ತೊಯ್ದು ಅತ್ಯಾಚಾರ

Update: 2021-03-28 16:29 GMT

ಹಾಸನ, ಮಾ.28: ರಾತ್ರಿ ವೇಳೆ ತನ್ನ ತಂದೆ ತಾಯಿಯೊಂದಿಗೆ ಮಲಗಿದ್ದ ಬಾಲಕಿಯನ್ನು ವ್ಯಕ್ತಿಯೋರ್ವ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರವೆಸಗಿ ಪರಾರಿಯಾಗಿರುವ ಘಟನೆ ಹಾಸನ ನಗರದ ಹೊಸ ಬಸ್ ನಿಲ್ದಾಣದ ಬಳಿ ನಡೆದಿದೆ.

ಹೊರ ರಾಜ್ಯದಿಂದ ಹಾಸನ ಜಿಲ್ಲೆಗೆ ಬಂದಿದ್ದ ಬಡ ಕುಟುಂಬವೊಂದು ಕೆಲಸ ಸಿಗದೇ ಭಿಕ್ಷಾಟನೆ ಮೊರೆ ಹೋಗಿತ್ತು. ರಾತ್ರಿ ನಗರದ ಹೊಸ ಬಸ್‌ ನಿಲ್ದಾಣ, ಮತ್ತಿತರ ಕಡೆಗಳಲ್ಲಿ ಮಲಗಬೇಕಾಗಿತ್ತು. ಶನಿವಾರ ಗಂಡ, ಪತ್ನಿ ಹಾಗೂ ಅವರ ಮಗಳು 7 ವರ್ಷದ ಮಗಳು ಎಂದಿನಂತೆ ನಗರದ ಬಸ್ ನಿಲ್ದಾಣದ ಒಳಗೆ ಇರುವ ಮೆಡಿಕಲ್ ಮುಂದೆ ಮಲಗಿದ್ದಾರೆ. ತಡರಾತ್ರಿ ಅಲ್ಲಿಗೆ ಬಂದ ವ್ಯಕ್ತಿ ಬಾಲಕಿಯನ್ನು ಹೆಗಲ ಮೇಲೆ ಹಾಕಿಕೊಂಡು ನಿರ್ಜನ ಪ್ರದೇಶಕ್ಕೆ ಹೊತ್ತೊಯ್ದು, ಅತ್ಯಾಚಾರ ಎಸಗಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ತಂದೆ-ತಾಯಿಗೆ ಎಚ್ಚರವಾದಾಗ ಬಳಿ ಮಗು ಇರಲಿಲ್ಲ. ಬಳಿಕ ಗಾಬರಿಯಲ್ಲಿ ಕೂಗಾಡಿದಾಗ ಪೊಲೀಸರು ಓಡಿ ಬಂದಿದ್ದಾರೆ. ಅಳುತ್ತಿದ್ದ ಮಗುವನ್ನು ಗಮನಿಸಿದ ಪ್ರಯಾಣಿಕರು ವಿಚಾರಿಸಿದ್ದಾರೆ. ಪೊಲೀಸ್ ಸಿಬ್ಬಂದಿ ಬಸ್ ನಿಲ್ದಾಣದಲ್ಲಿದ್ದ ಸಿಸಿಟಿವಿಯನ್ನು ಪರಿಶೀಲನೆ ನಡೆಸಿದಾಗ ಆರೋಪಿ ಮಗುವನ್ನು ಎತ್ತಿಕೊಂಡು ಹೋಗುತ್ತಿರುವುದು ಸೆರೆಯಾಗಿದೆ.

ಈ ಬಗ್ಗೆ ಬಾಲಕಿಯ ತಾಯಿ ನೀಡಿದ ದೂರಿನ ಮೇರೆಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲು ತನಿಖೆ ಮುಂದುವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News