ಶಿವಮೊಗ್ಗ: ಸಿಡಿಲು ಬಡಿದು ಯುವಕ ಮೃತ್ಯು
Update: 2021-03-28 22:31 IST
ಶಿವಮೊಗ್ಗ, ಮಾ.28: ಸಿಡಿಲು ಬಡಿದು ಯುವಕ ಸಾವನ್ನಪ್ಪಿರುವ ಘಟನೆ ಆಯನೂರು ಸಮೀಪದ ಚಾಮುಂಡಿಪುರದಲ್ಲಿ ನಡೆದಿದೆ.
ಆದೀಲ್(18) ಸಾವನ್ನಪ್ಪಿದ ಯುವಕ. ಆದೀಲ್ ಶಿವಮೊಗ್ಗದ ಟಿಪ್ಪು ನಗರದ ನಿವಾಸಿ. ಈತ ತನ್ನ ಮಾವನ ಶುಂಠಿ ಕಣದಲ್ಲಿ ಕೆಲಸ ಮಾಡುವ ವೇಳೆ ಸಿಡಿಲು ಬಡಿದು ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಘಟನೆ ಸಂಬಂಧ ಕುರಿತು ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.