ವಿಶ್ವದಲ್ಲೇ 53% ಕಲ್ಲಿದ್ದಲು ಉತ್ಪಾದಿಸಿದ ಚೀನಾ: ಅಧ್ಯಯನ ವರದಿ

Update: 2021-03-29 15:28 GMT

ಶಾಂಘೈ (ಚೀನಾ), ಮಾ. 29: 2020ರಲ್ಲಿ ಉತ್ಪಾದನೆಯಾದ ಕಲ್ಲಿದ್ದಲು ಆಧಾರಿತ ಒಟ್ಟು ವಿದ್ಯುತ್‌ನ 53 ಶೇಕಡದಷ್ಟನ್ನು ಚೀನಾವೊಂದೇ ಉತ್ಪಾದಿಸಿದೆ ಎಂದು ಜಾಗತಿಕ ಅಧ್ಯಯನವೊಂದು ಸೋಮವಾರ ತಿಳಿಸಿದೆ. ಇದು ಐದು ವರ್ಷಗಳ ಹಿಂದಿನ ಸಂಖ್ಯೆಗಿಂತ 9 ಶೇಕಡದಷ್ಟು ಹೆಚ್ಚಾಗಿದೆ.

 ಇಂಗಾಲದ ಡೈ ಆಕ್ಸೈಡ್ ಉತ್ಪಾದನೆಯನ್ನು ಕಡಿಮೆ ಮಾಡುವ ಪಣ ಮತ್ತು ನೂರಾರು ನವೀಕರಿಸಬಹುದಾದ ಇಂಧನ ಸ್ಥಾವರಗಳ ನಿರ್ಮಾಣದ ಹೊರತಾಗಿಯೂ ಈ ಬೆಳವಣಿಗೆ ಸಂಭವಿಸಿದೆ.

ಕಳೆದ ವರ್ಷ ದಾಖಲೆಯ 71.7 ಗಿಗಾವ್ಯಾಟ್ ಗಾಳಿ ವಿದ್ಯುತ್ ಮತ್ತು 48.2 ಗಿಗಾವ್ಯಾಟ್ ಸೌರ ವಿದ್ಯುತ್ತನ್ನು ಉತ್ಪಾದಿಸಿರುವ ಹೊರತಾಗಿಯೂ, ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನೆಯಲ್ಲಿ ಏರಿಕೆ ಕಂಡ ಏಕೈಕ ಜಿ20 ದೇಶ ಚೀನಾವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News