ಕುಶಾಲನಗರ ಮೂಲದ ಯೋಧ ಡೆಹ್ರಾಡೂನ್‍ನಲ್ಲಿ ಆತ್ಮಹತ್ಯೆ
Update: 2021-03-29 23:25 IST
ಮಡಿಕೇರಿ, ಮಾ.29: ಲಡಾಕ್‍ನ ಲೇಹ್‍ನಲ್ಲಿ ಸೇನೆಯ ಹವಾಲ್ದಾರ್ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಕುಶಾಲನಗರ ಮೂಲದ ಯೋಧರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕುಶಾಲನಗರ ಸಮೀಪದ ಗೊಂದಿಬಸವನಹಳ್ಳಿಯ ಪ್ರಜ್ವಲ್ (36) ಎಂಬವವರೆ ಮೃತ ಯೋಧ. ಕೌಟುಂಬಿಕ ಸಮಸ್ಯೆ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ.
ಉತ್ತರಾಖಂಡದ ಡೆಹ್ರಾಡೂನ್‍ನಲ್ಲಿ ಪ್ರಜ್ವಲ್ ನೇಣಿಗೆ ಶರಣಾಗಿದ್ದು, ತನ್ನ ಸಾವಿಗೆ ಕಾರಣವಾಗಿರುವ ವಿಷಯದ ಬಗ್ಗೆ ಲೈವ್ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವುದು ಕಂಡು ಬಂದಿದೆ.