ವಿಜಯಪುರ: ಸಂಗಮೇಶ್ವರ ಶುಗರ್ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ
Update: 2021-03-31 22:12 IST
ವಿಜಯಪುರ, ಮಾ.31: ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಮನ್ನಾಪುರ ಗ್ರಾಮದ ಬಳಿಯಿರುವ ಸಂಗಮೇಶ್ವರ ಶುಗರ್ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ ಸಂಭವಿಸಿದೆ.
ಶುಗರ್ ಫ್ಯಾಕ್ಟರಿಯ ಮುಖ್ಯ ಯಂತ್ರದ ಚಕ್ರದ ಬೆಲ್ಟ್ ಸುತ್ತ ಬೆಂಕಿ ಕಾಣಿಸಿಕೊಂಡಿದ್ದು, ಬೆಲ್ಟ್ ನಿಂದ ಹೊರ ಬರುವ ಬೆಂಕಿ ಕಬ್ಬಿನ ರವದಿಗೆ ಬಿದ್ದಿರುವುದರಿಂದ ಸುಮಾರು ಒಂದು ಲಕ್ಷದಷ್ಟು ಹಾನಿ ಸಂಭವಿಸಿದೆ ಎನ್ನಲಾಗಿದೆ.
ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದರು.