ಚಿತ್ರಮಂದಿರದಲ್ಲಿ ಶೇ.50 ಸ್ಥಳಾವಕಾಶ: ಆದೇಶ ಹಿಂಪಡೆಯಲು ಸರಕಾರಕ್ಕೆ ಪುನೀತ್ ರಾಜಕುಮಾರ್ ಮನವಿ

Update: 2021-04-02 15:48 GMT
Photo: Facebook/PuneethRajkumar

ಬೆಂಗಳೂರು, ಎ.2: ಎಲ್ಲ ಕಡೆ ಚುನಾವಣೆ ರ್‍ಯಾಲಿ, ಹಲವು ಕಾರ್ಯಕ್ರಮಗಳು ನಡೆಯುತ್ತಿವೆ. ಇದರ ನಡುವೆ ಸಿನಿಮಾವನ್ನು ಮಾತ್ರ ಗುರಿಯಾಗಿಸಿ ಏಕೆ ನಿರ್ಬಂಧ ಹಾಕಲಾಗುತ್ತಿದೆ ಎಂದು ಖ್ಯಾತ ನಟ ಪುನೀತ್ ರಾಜಕುಮಾರ್ ಪ್ರಶ್ನಿಸಿದ್ದಾರೆ.

ಫೇಸ್ಬುಕ್ ಲೈವ್ ನಲ್ಲಿ ಮಾತನಾಡಿದ ಅವರು, ಚಿತ್ರಮಂದಿರದೊಳಗೆ ಕೇವಲ 500-600 ಜನರಷ್ಟೇ ಇರುತ್ತಾರೆ. ಎಲ್ಲರೂ ಮಾಸ್ಕ್ ಧರಿಸಿಯೇ ಚಿತ್ರಗಳನ್ನು ನೋಡುತ್ತಿದ್ದಾರೆ. ಎರಡೆರಡು ಇಂಟರ್‍ವಲ್‍ಗಳು ಇವೆ. ಏಕಾಏಕಿ ಈ ನಿರ್ಬಂಧ ಹೇರಿರುವುದು, ಉದ್ಯಮ, ಚಿತ್ರರಂಗವನ್ನು ನಡುನೀರಿನಲ್ಲಿ ಕೈಬಿಟ್ಟಂತಾಗಿದೆ. 50 ಶೇ. ಅವಕಾಶ ಬೇಡ, ಸಂಪೂರ್ಣ 100 ಶೇ. ಆಸನಗಳ ಭರ್ತಿ ಮಾಡುವ ಅವಕಾಶ ಇರಬೇಕು ಎಂದು ಅವರು ತಿಳಿಸಿದ್ದಾರೆ.

ಸಿನಿಮಾಕ್ಕೆ ಜನರ ಬೆಂಬಲ ಇರುವಾಗ ಸರಕಾರವೂ ಬೆಂಬಲಕ್ಕೆ ನಿಲ್ಲಬೇಕು. ದಯವಿಟ್ಟು, ನಿರ್ಬಂಧ ಹಾಕಬೇಡಿ. ಚಿತ್ರರಂಗಕ್ಕೆ ಇದು ಕಷ್ಟವಾಗಲಿದೆ. ಇಂತಹ ನಿರ್ಧಾರ ಜನರಲ್ಲಿ ಹೆಚ್ಚಿನ ಭಯ ಮೂಡಿಸಲಿದೆ ಎಂದು ಪುನೀತ್ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News