ಅಶ್ಲೀಲ ಸಿಡಿ ಪ್ರಕರಣ: ನಾಲ್ಕನೇ ದಿನವೂ ಸಂತ್ರಸ್ತ ಯುವತಿಯ ವಿಚಾರಣೆ

Update: 2021-04-03 15:13 GMT

ಅಶ್ಲೀಲ ಸಿಡಿ ಪ್ರಕರಣ: ನಾಲ್ಕನೇ ದಿನವೂ ಸಂತ್ರಸ್ತ ಯುವತಿಯ ವಿಚಾರಣೆ

ಬೆಂಗಳೂರು, ಎ.3: ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ಸಿಡಿ ಪ್ರಕರಣ ಸಂಬಂಧ ತನಿಖೆ ಮುಂದುವರೆಸಿರುವ ಸಿಟ್(ವಿಶೇಷ ತನಿಖಾ ದಳ) ಅಧಿಕಾರಿಗಳು ಇಲ್ಲಿನ ಆಡುಗೋಡಿ ವ್ಯಾಪ್ತಿಯಲ್ಲಿರುವ ತಾಂತ್ರಿಕ ವಿಭಾಗದ ಕೊಠಡಿಯಲ್ಲಿ ನಾಲ್ಕನೇ ದಿನವೂ ಸಂತ್ರಸ್ತ ಯುವತಿಯ ವಿಚಾರಣೆ ಮುಂದುವರೆಸಿದ ಅಧಿಕಾರಿಗಳು, ಪೋಷಕರ ಅಪಹರಣ ಆರೋಪ ಕುರಿತು ಪ್ರಶ್ನಿಸಿ ಆಕೆಯ ಹೇಳಿಕೆಗಳನ್ನು ವಿಡಿಯೊ ರೂಪದಲ್ಲಿ ಸಂಗ್ರಹಿಸಿದರು ಎಂದು ತಿಳಿದು ಬಂದಿದೆ.

ಇನ್ನು, ಸಿಡಿ ಬಿಡುಗಡೆ ಮಾಡಿರುವ ವ್ಯಕ್ತಿಗಳ ಕುರಿತಾಗಿಯೂ ವಿಚಾರಣೆ ನಡೆಸಲಾಗಿದ್ದು, ತಲೆಮರೆಸಿಕೊಂಡಿರುವ ಕೆಲ ವ್ಯಕ್ತಿಗಳೂ, ಹೇಗೆ ಪರಿಚಯ ಎಂದು ಪ್ರಶ್ನಿಸಿದ್ದಾರೆ. ರಮೇಶ್ ಜಾರಕಿಹೊಳಿ ಅವರನ್ನು ಬೆದರಿಕೆ ಹಾಕಿಲ್ಲ. ಹಣ ಇನ್ನಿತರೆ ಬೆಲೆಬಾಳುವ ವಸ್ತುಗಳು ನೀಡುವಂತೆಯೂ ಬೇಡಿಕೆಯಿಟ್ಟಿಲ್ಲ. ನನಗೆ ಆಗಿರುವ ಅನ್ಯಾಯದ ವಿರುದ್ಧ ಹೋರಾಟ ನಡೆಸಲು ಕೆಲವರನ್ನು ಸಂಪರ್ಕಿಸಿದ್ದೇ ವಿನಃ, ಬೇರೆ ಉದ್ದೇಶವಿಲ್ಲ ಎಂದು ಯುವತಿ ತನಿಖಾಧಿಕಾರಿಗಳ ಮುಂದೆ ಹೇಳಿಕೆ ನೀಡಿರುವುದಾಗಿ ವರದಿಯಾಗಿದೆ.

ಶನಿವಾರ ಯುವತಿಯ ಪ್ರಾಥಮಿಕ ವಿಚಾರಣೆಯನ್ನು ಭಾಗಶಃ ಪೂರ್ಣಗೊಳಿಸಿರುವ ಸಿಟ್ ತನಿಖಾಧಿಕಾರಿಗಳು, ಮತ್ತೆ ನೋಟಿಸ್ ನೀಡಿದಾಗ ವಿಚಾರಣೆಗೆ ಹಾಜರಾಗಬೇಕು. ತಮಗೆ ಭದ್ರತೆಯೂ ಮುಂದುವರೆಸಲಾಗುವುದು ಎಂದು ಯುವತಿಗೆ ಸಿಟ್ ಮೌಖಿಕ ಸೂಚನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಮಾಜಿ ಸಚಿವರೊಬ್ಬರಿಗೆ ನೋಟಿಸ್?: ಸಂತ್ರಸ್ತ ಯುವತಿಯೊಂದಿಗೆ ಮೊಬೈಲ್ ಸಂಪರ್ಕ ಹೊಂದಿರುವ ವ್ಯಕ್ತಿಗಳ ಪಟ್ಟಿ ಮಾಡಿರುವ ಸಿಟ್ ತನಿಖಾಧಿಕಾರಿಗಳು, ಮಾಜಿ ಸಚಿವರೊಬ್ಬರಿಗೆ ನೋಟಿಸ್ ನೀಡಿ, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News