ಪಕ್ಷದ ದೃಷ್ಟಿಯಿಂದ ಇಬ್ಬರೂ ನಾಯಕರು ಒಂದಾಗಿ ಹೋಗಬೇಕು: ಸಂಸದ ವಿ.ಶ್ರೀನಿವಾಸ ಪ್ರಸಾದ್

Update: 2021-04-03 18:23 GMT

ಮೈಸೂರು,ಎ.3: ರಾಜ್ಯ ಮತ್ತು ಪಕ್ಷದ ದೃಷ್ಟಿಯಿಂದ ಇಬ್ಬರೂ ನಾಯಕರುಗಳು ಕುಳಿತು ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಸಲಹೆ ನೀಡಿದರು.

ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇತ್ತೀಚಿನ ರಾಜಕೀಯದ ಬಗ್ಗೆ ನಾನು ತಲೆಕೆಡಸಿಕೊಂಡಿಲ್ಲ, ಆಸಕ್ತಿನೂ ಇಲ್ಲ, ಆರೋಗ್ಯದ ದೃಷ್ಟಿಯಿಂದ ಆ ಕಡೆ ಗಮನಹರಿಸಿಲ್ಲ, ಆದರೂ ಇಬ್ಬರೂ ಒಂದಾಗಿ ಹೋಗಿ ಎಂದು ಹೇಳುತ್ತೇನೆ. ಸಣ್ಣ ಪುಟ್ಟ ಸಮಸ್ಯೆಗಳಿದ್ದರೆ ರಾಜ್ಯ, ಪಕ್ಷ ಮತ್ತು ನಾಯಕತ್ವದ ಹಿತದೃಷ್ಟಿಯಿಂದ ಕುಳಿತು ಮಾತನಾಡಿ ಬಗೆಹರಿಸಿಕೊಳ್ಳಬೇಕು ಎಂದು ಹೇಳಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈಶ್ವರಪ್ಪ ಅವರನ್ನು ಕರೆದು ಮಾತನಾಡಬೇಕು, ಇಷ್ಟೆಲ್ಲಾ ಸಮಸ್ಯೆಗಳು ಆಗುವ ತನಕ ಬಿಟ್ಟುಕೊಳ್ಳಬಾರದು, ಈಗಾಗಲೇ ಕೇಂದ್ರದ ನಾಯಕರುಗಳ ಗಮನಕ್ಕೆ ಬಂದಿದೆ. ಚುನಾವಣೆಗಳು ನಡೆಯುತ್ತಿರುವುದರಿಂದ ಸಮಸ್ಯೆ ಬಗೆಹರಿದಿಲ್ಲ, ನಂತರ ಎಲ್ಲವೂ ಸರಿಯಾಗಲಿದೆ ಎಂದು ಹೇಳಿದರು.

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿಷಯ ಬೇಡ, ಭವಿಷ್ಯ ಹೇಳುವುದು ಮತ್ತೊಂದು ಬೇಕಾಗಿಲ್ಲ, ಪಕ್ಷದ ದೃಷ್ಟಿಯಿಂದ ಸಮಸ್ಯೆ ಬಗೆಹರಿಸಿಕೊಳ್ಳುವುದು ಒಳ್ಳೆಯದು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News