ಓ ಮೆಣಸೇ...

Update: 2021-04-04 19:30 GMT

ಭಾರತ ಮತ್ತು ಬಾಂಗ್ಲಾದೇಶವು ಸ್ಥಿರತೆ, ಪ್ರೀತಿ ಹಾಗೂ ಶಾಂತಿಯನ್ನು ಬಯಸುತ್ತವೆ - ನರೇಂದ್ರ ಮೋದಿ, ಪ್ರಧಾನಿ
ಭಾರತದೊಳಗಿರುವ ಪ್ರಜೆಗಳೂ ಅದನ್ನೇ ಬಯಸುತ್ತಿದ್ದಾರೆ. ಅವರಿಗೂ ಅವು ಸಿಗುವಂತೆ ಮಾಡಿ.


ಡಿಕೆಶಿ ರಾಜಕೀಯದಲ್ಲಿರಲು ನಾಲಾಯಕ್- ರಮೇಶ್ ಜಾರಕಿಹೊಳಿ, ಮಾಜಿ ಸಚಿವ
ರಾಜಕೀಯದೊಳಗಿರಬೇಕಾದರೆ ಸೀಡಿಯೊಳಗಿರಬೇಕಾದುದು ಅನಿವಾರ್ಯವೇ?


‘ಒಂದೇ ದೇಶ-ಒಂದು ಚುನಾವಣೆ’ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಮಾಡದೇ ಇದ್ದ್ದುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ದ್ರೋಹ -ಕೆ.ಎಸ್.ಈಶ್ವರಪ್ಪ, ಸಚಿವ
ಒಂದೇ ದೇಶ-ಒಂದು ಚುನಾವಣೆ ಎನ್ನುವುದೇ ಪ್ರಜಾಸತ್ತೆಗೆ ಎಸಗುವ ದ್ರೋಹವಾಗಿದ್ದರೆ?


 ರಾಜ್ಯಗಳ ವಿಚಾರಗಳಲ್ಲಿ ಕೇಂದ್ರ ಸರಕಾರ ಅತಿಕ್ರಮಣ ಮಾಡಿ, ಹಸ್ತಕ್ಷೇಪ ನಡೆಸುತ್ತಿದೆ - ಜೆ.ಸಿ.ಮಾಧುಸ್ವಾಮಿ, ಸಚಿವ
ಕೇಂದ್ರದಲ್ಲಿ ಯುಪಿಎ ಸರಕಾರವಿದೆ ಎಂದು ತಪ್ಪು ತಿಳಿದು ಆಡಿದ ಮಾತಂತೆ.


ಮಹಿಳೆ ಪ್ರತಿ ಯಶಸ್ವಿ ಪುರುಷನ ಹಿಂದೆ ಇರುವುದಿಲ್ಲ, ಬದಲಿಗೆ ಪಕ್ಕದಲ್ಲಿಯೇ ಇರುತ್ತಾಳೆ - ಶಶಿಕಲಾ ಜೊಲ್ಲೆ, ಸಚಿವೆ
ಕೆಲವೊಮ್ಮೆ ಅವಳು ಸೀಡಿಯೊಳಗಿರುತ್ತಾಳೆ.


ರಾಜ್ಯ ರಾಜಕಾರಣದಲ್ಲಿ ಏನೇನೋ ನಡೆಯುತ್ತಿದೆ. ಉಪ್ಪು ತಿಂದವ ನೀರು ಕುಡಿಯುತ್ತಾನೆ - ಜಗ್ಗೇಶ್, ನಟ
ಜೊತೆಗೆ ಬಿಜೆಪಿ ವರಿಷ್ಠರು ಕಳ್ಳೆಕಾಯಿ ತಿನ್ನುತ್ತಿದ್ದಾರಂತೆ.


ಬೆಳಗಾವಿ ಲೋಕಸಭೆ ಉಪಚುನಾವಣೆಯ ಮೇಲೆ ಸೀಡಿ ಪರಿಣಾಮ ಬೀರುವುದಿಲ್ಲ - ಜಗದೀಶ್ ಶೆಟ್ಟರ್, ಸಚಿವ
ಇನ್ನೂ ಒಂದಿಷ್ಟು ಸೀಡಿಗಳು ಬಿಡುಗಡೆಯಾದರೆ ಪರಿಣಾಮ ಬೀರಬಹುದೇ?


ಸೀಡಿ ಪ್ರಕರಣದ ಬಗ್ಗೆ ಕೇಳುವಾಗ ನನಗೆ ವಾಕರಿಕೆ ಬರುತ್ತದೆ - ಕೆ.ಎಸ್.ಈಶ್ವರಪ್ಪ, ಸಚಿವ
ಹಾಗೆಂದು ಯಡಿಯೂರಪ್ಪ ಮೇಲೆ ವಾಂತಿ ಮಾಡಿ ಬಿಡುವುದೇ?


ನಾನು ಮುಖ್ಯಮಂತ್ರಿ ಆದರೆ ಐದೇ ನಿಮಿಷದಲ್ಲಿ ಎಲ್ಲ ಸಮಾಜಕ್ಕೂ ಮೀಸಲು ಘೋಷಿಸುತ್ತೇನೆ - ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ
ಮುಖ್ಯಮಂತ್ರಿ ಆಗದೇ ಇರುವುದೇ ಒಳ್ಳೆಯದು ಬಿಡಿ.


ಚಿಕ್ಕವಳಿದ್ದಾಗ ನಾನು ಯಾರಿಗೂ ಬೇಡವಾದ ಹೆಣ್ಣು ಮಗುವಾಗಿದ್ದೆ - ಕಂಗನಾ ರಣಾವತ್, ನಟಿ
ಈಗ ತಾವು ಪೊಲೀಸರಿಗೆ ತುಂಬಾ ಬೇಕಾಗಿರುವ ಹೆಣ್ಣು ಮಗುವಂತೆ.


ಪ್ರಧಾನಿ ಮೋದಿಯಿಂದ ದೇಶಕ್ಕೆ ತೊಂದರೆ ಆಗಿದೆಯೇ ವಿನಃ ಏನೂ ಒಳ್ಳೆಯದಾಗಿಲ್ಲ - ಮಲ್ಲಿಕಾರ್ಜುನ್ ಖರ್ಗೆ, ಕಾಂಗ್ರೆಸ್ ಮುಖಂಡ
ಆದರೆ ಕಾಂಗ್ರೆಸ್‌ಗೆ ತೊಂದರೆಯಾಗಿರುವುದು ಕಾಂಗ್ರೆಸ್‌ನೊಳಗಿರುವ ಮುಖಂಡರಿಂದಲೇ ಹೊರತು, ಮೋದಿಯಿಂದಲ್ಲ.


ಕೃಷಿ ಕ್ಷೇತ್ರಕ್ಕೆ ಆಧುನಿಕತೆಯ ಅಗತ್ಯವಿದೆ - ನರೇಂದ್ರ ಮೋದಿ, ಪ್ರಧಾನಿ
ಅದಾನಿ, ಅಂಬಾನಿಗಳನ್ನೇ ಇವರು ಆಧುನಿಕತೆ ಎಂದು ಕರೆಯುತ್ತಿದ್ದಾರೆ.


ನಾನು ಮುಖ್ಯಮಂತ್ರಿ ಆಗುವುದಕ್ಕಿಂತ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನನಗೆ ಮುಖ್ಯ - ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ಕಾಂಗ್ರೆಸ್ ಅಧಿಕಾರಕ್ಕೆ ಬರದೆ, ನೀವು ಮುಖ್ಯಮಂತ್ರಿ ಆಗುವುದಾದರೂ ಹೇಗೆ?


 ಶಾಸಕರು ಏನು ಮಾಡುತ್ತಿದ್ದಾರೆ ಎಂದು ಸರಕಾರಕ್ಕೆ ಗೊತ್ತಿಲ್ಲ, ಸರಕಾರ ಏನು ಮಾಡುತ್ತಿದೆ ಎಂದು ಶಾಸಕರಿಗೆ ಗೊತ್ತಿಲ್ಲ - ಎಂ.ಬಿ.ಪಾಟೀಲ್, ಮಾಜಿ ಸಚಿವ
ಸಚಿವರು ಏನು ಮಾಡುತ್ತಿದ್ದಾರೆ ಎನ್ನುವುದು ಸೀಡಿಗಳ ಮೂಲಕ ನಾಡಿಗೆ ಗೊತ್ತಾಗಿದೆ.


ವಿಜಯನಗರ ಸಾಮ್ರಾಜ್ಯ ಹುಟ್ಟಿಕೊಂಡಿದ್ದೇ ಹಿಂದುತ್ವ ರಕ್ಷಿಸಲು - ಸಿ.ಟಿ.ರವಿ, ಬಿಜೆಪಿ ಪ್ರ.ಕಾರ್ಯದರ್ಶಿ
ಹಿಂದುತ್ವ ರಕ್ಷಿಸುವುದೆಂದರೆ, ಸೀಡಿಯೊಳಗೆ ಸಿಲುಕಿಕೊಂಡವರನ್ನು ರಕ್ಷಿಸುವುದೇ?


ಪೊಲೀಸ್ ವ್ಯವಸ್ಥೆ ಮಾದರಿಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಿಬ್ಬಂದಿಗೂ ಸಮವಸ್ತ್ರ ನೀಡಲಾಗುವುದು- ಮುರುಗೇಶ್ ನಿರಾಣಿ, ಸಚಿವ
ಗಣಿ ದೋಚುವವರಿಗೂ ಒಂದು ಸಮವಸ್ತ್ರ ಕೊಟ್ಟಿದ್ದರೆ ಗುರುತು ಹಿಡಿಯಲು ಸುಲಭವಾಗುತ್ತಿತ್ತು.


ಪ.ಬಂಗಾಳದ ತಾಯಂದಿರು ಮತ್ತು ಪುತ್ರಿಯರ ಸುರಕ್ಷತೆಗಾಗಿ ಬಿಜೆಪಿ ಹೋರಾಟ ಮಾಡುತ್ತದೆ- ಅಮಿತ್ ಶಾ, ಕೇಂದ್ರ ಸಚಿವ

ಹಾಥರಸ್‌ನಲ್ಲಿ ನೀಡಿದ ಸುರಕ್ಷತೆಯನ್ನು ಪ. ಬಂಗಾಳಕ್ಕೆ ವರ್ಗಾಯಿಸುವ ಉದ್ದೇಶವಿದೆಯೇ?


ಸುಳ್ಳು ಎಂದರೆ ಕಾಂಗ್ರೆಸ್, ಸತ್ಯ ಎಂದರೆ ಬಿಜೆಪಿ - ಶ್ರೀರಾಮುಲು, ಸಚಿವ
ಕೊಲ್ಲು ಎಂದರೆ ಆರೆಸ್ಸೆಸ್ ಇರಬೇಕು.


ಪ.ಬಂಗಾಳದಲ್ಲಿ ಎ.1ರಂದು ಪ್ರಧಾನಿ ಮೋದಿ ಮಾಡಿರುವ ಭಾಷಣದಲ್ಲಿ ಜೀವಮಾನದಲ್ಲಿ ಒಮ್ಮೆ ಮಾತ್ರ ನಮ್ಮ ಕಿವಿಗೆ ಬೀಳಬಹುದಾದ ವಿಚಾರಗಳಿವೆ

- ಬಿ.ಎಲ್. ಸಂತೋಷ್, ಬಿಜೆಪಿ ಕಾರ್ಯದರ್ಶಿ
ಆ ವಿಚಾರಗಳಿಂದ ಪೆಟ್ರೋಲ್ ತಯಾರಿಸಿ ಹಂಚುವ ಯೋಜನೆಯೇನಾದರೂ ಇದೆಯೇ?


ಭಾರತ -ಚೀನಾ ಗಡಿಯಲ್ಲಿ ಒಂದೇ ಒಂದು ಇಂಚು ಭೂಮಿಯೂ ಚೀನಾದ ಪಾಲಾಗಿಲ್ಲ - ಎಂ.ಎಂ. ನರವಣೆ, ಭೂ ಸೇನಾ ಮುಖ್ಯಸ್ಥ
ಮತ್ತೆ ಅದು ಭಾರತವು ಚೀನಾಕ್ಕೆ ಕೊಟ್ಟ ಉಡುಗೊರೆಯೇ?


ರಾಹುಲ್ ಗಾಂಧಿಯ ಕಾಲು ಹಿಡಿದು ಸಿದ್ದರಾಮಯ್ಯ ಮುಖ್ಯಮಂತ್ರಿಯಾದದ್ದು ಎನ್ನುವುದು ಎಲ್ಲರಿಗೂ ಗೊತ್ತಿದೆ - ನಳಿನ್‌ಕುಮಾರ್ ಕಟೀಲು, ಸಂಸದ
ಪ್ರಭಾಕರ ಭಟ್ಟರ ಕಾಲು ಹಿಡಿದು ಅಧ್ಯಕ್ಷರಾದವರು ಈ ರೀತಿ ಮಾತನಾಡುವುದು ಸಹಜ ಎಂದರಂತೆ ಸಿದ್ದರಾಮಯ್ಯ.


ಬಿಜೆಪಿಯವರಿಗೆ ಲವ್ ಎಂದರೇನೆಂದು ಗೊತ್ತಿಲ್ಲ, ಜಿಹಾದ್ ಎಂದರೆ ಏನೆಂದೂ ಗೊತ್ತಿಲ್ಲ - ಸಲ್ಮಾನ್ ಖುರ್ಷಿದ್ , ಕಾಂಗ್ರೆಸ್ ಮುಖಂಡ
ಲವ್‌ಜಿಹಾದ್ ಮೂಲಕ ರಾಜಕೀಯ ಮಾಡಲು ಗೊತ್ತಿದ್ದರೆ ಸಾಕಾಗುವುದಿಲ್ಲವೇ?


ಕೊರೋನ ಕಾಟ, 45 ದಿನಗಳ ಲಾಕ್‌ಡೌನ್ ನಡುವೆಯೂ 2020-21ನೇ ಸಾಲಿನಲ್ಲಿ ಅಬಕಾರಿ ಆದಾಯ ನಿರೀಕ್ಷೆಗೂ ಮೀರಿ ಸಂಗ್ರಹವಾಗಿದೆ. - ಕೆ.ಗೋಪಾಲಯ್ಯ, ಸಚಿವ
ಜನರ ಬದುಕನ್ನು ನಾಶ ಮಾಡಿ, ಅಬಕಾರಿ ಇಲಾಖೆಯ ಖಜಾನೆ ತುಂಬಿಸಿಕೊಂಡದ್ದೂ ಒಂದು ಸಾಧನೆಯೇ?


ಭಾರತೀಯ ರೈಲ್ವೆಯು ದೇಶದ ಮತ್ತು ಜನತೆಯ ಆಸ್ತಿ, ಅದನ್ನು ಖಾಸಗೀಕರಣಗೊಳಿಸುವ ಪ್ರಶ್ನೆಯೇ ಇಲ್ಲ - ಪಿಯೂಶ್ ಗೋಯಲ್, ಕೇಂದ್ರ ಸಚಿವ
ಜನತೆಯ ಆಸ್ತಿಯಾಗಿದ್ದಕ್ಕೆ ತಾನೇ ತಾವು ಎಲ್ಲವನ್ನೂ ಮಾರಲು ಹೊರಟಿರುವುದು. ತಮ್ಮ ಆಸ್ತಿಯಾಗಿದ್ದರೆ ಮಾರುತ್ತಿದ್ದಿರಾ?


ಮುಖ್ಯಮಂತ್ರಿ ವಿರುದ್ಧ ಸಚಿವರು ದೂರು ಕೊಡುವುದು ಬಿಜೆಪಿಯ ಸಿದ್ಧಾಂತಕ್ಕೆ ವಿರುದ್ಧ - ಎಂ.ಪಿ.ರೇಣುಕಾಚಾರ್ಯ, ಶಾಸಕ
ಮುಖ್ಯಮಂತ್ರಿಯ ವಿರುದ್ಧ ದೂರುಕೊಟ್ಟ ಅನುಭವಿಗಳ ಮಾತು 

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...