ಕರ್ನಾಟಕ ಲಲಿತಕಲಾ ಅಕಾಡಮಿ ಗೌರವ ಪ್ರಶಸ್ತಿ ಘೋಷಣೆ
Update: 2021-04-05 22:48 IST
ಬೆಂಗಳೂರು, ಎ.5: ಕರ್ನಾಟಕ ಲಲಿತ ಕಲಾ ಅಕಾಡಮಿಯ 2020ನೆ ಸಾಲಿನ ಗೌರವ ಪ್ರಶಸ್ತಿ ಘೋಷಣೆಯಾಗಿದೆ. ಒಬ್ಬ ಮಹಿಳಾ ಕಲಾವಿದೆ ಸೇರಿ ಮೂವರು ಕಲಾವಿದರನ್ನು ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಮೊತ್ತ 50 ಸಾವಿರ ನಗದು ಇರಲಿದೆ.
ಗೌರವ ಪ್ರಶಸ್ತಿಗೆ ಮಂಗಳೂರಿನ ಗಣೇಶ್ ಸೋಮಯಾಜಿ, ಬೆಂಗಳೂರಿನ ಮೀರಾ ಕುಮಾರ್ ಹಾಗೂ ಧಾರವಾಡದ ಬಿ.ಮಾರುತಿ ಅವರ ಹೆಸರು ಘೋಷಿಸಲಾಗಿದೆ. 49ನೆ ವಾರ್ಷಿಕ ಕಲಾ ಬಹುಮಾನಕ್ಕೆ 89 ಕಲಾಕೃತಿಗಳನ್ನು ಆಯ್ಕೆ ಮಾಡಿ, ಅದರಲ್ಲಿ ಉತ್ತಮ 10 ಕಲಾಕೃತಿಗಳಿಗೆ ತಲಾ 25 ಸಾವಿರದಂತೆ ಹತ್ತು ಜನ ಕಲಾವಿದರನ್ನು ಆಯ್ಕೆ ಮಾಡಲಾಗಿದೆ.
ಈ ಬಹುಮಾನಕ್ಕೆ ಭರತ್ ಕಂದಕೂರ, ಚಂದ್ರಶೇಖರ್ ಜಿ.ಪಾಟೀಲ್, ಮೈನು ವೈ, ಉಮೇಶ್ ವಿ.ಎಂ, ಮಂಜುನಾಥ್ ಬಿ, ಅಲ್ಕಾ ಚಂದ್ವಾನಿ, ಕಿರಣ್ ಶೇರ್ ಖಾನೆ, ರೇಣುಕಾ ಕೇಸರಮಡು, ಸಂತೋಷ್ ರಾಥೋಡ್, ದಸ್ತಗಿರಿ ಮಸ್ತಾನ್ ಸಾಬ್ ಅವರನ್ನು ಆಯ್ಕೆ ಮಾಡಲಾಗಿದೆ.