17 ಡಿವೈಎಸ್ಪಿಗಳಿಗೆ ಮುಂಭಡ್ತಿ ನೀಡಿ ರಾಜ್ಯ ಸರಕಾರ ಆದೇಶ

Update: 2021-04-06 11:20 GMT

ಬೆಂಗಳೂರು, ಎ.6: ರಾಜ್ಯ ಪೊಲೀಸ್ ಇಲಾಖೆಯ 17 ಮಂದಿ ಸಿವಿಲ್ ವೃಂದದ ಡಿವೈಎಸ್ಪಿಗಳಿಗೆ ಮುಂಭಡ್ತಿ ನೀಡಿ ರಾಜ್ಯ ಸರಕಾರ ಮಂಗಳವಾರ ಆದೇಶಿಸಿದೆ. 

ವಿ.ಮರಿಯಪ್ಪ, ಎಸ್.ರಮೇಶ್ ಕುಮಾರ್, ಎಚ್.ಪ್ರವೀನ್ ನಾಯ್ಕ್ ಅವರನ್ನು ಮುಂಭಡ್ತಿ ನೀಡಿ ರಾಜ್ಯ ಗುಪ್ತವಾರ್ತೆ ಎಸ್ಪಿಯಾಗಿ ಸ್ಥಳ ನಿಯುಕ್ತಿಗೊಳಿಸಲಾಗಿದೆ. ವಾಲಿಬಾಷಾ, ಎಂ.ವೇಣುಗೋಪಾಲ್, ಸಿ.ಮಲ್ಲಿಕ್, ಪುಟ್ಟಮಾದಯ್ಯ, ಸತೀಶ್ ಎಸ್.ಚಿಟಗುಬ್ಬಿ, ಕೆ.ಎಸ್.ಸುಂದರರಾಜ್, ಪಿ.ಎ.ಪುರುಷೋತ್ತಮ, ಎಂ.ಎಲ್.ಪುರುಷೋತ್ತಮ ಅವರನ್ನು ಕರ್ನಾಟಕ ಲೋಕಾಯಕ್ತ ಎಸ್ಪಿಗಳಾಗಿ ನೇಮಿಸಲಾಗಿದೆ.

ಬಿ.ಎಂ.ನಾರಾಯಣಸ್ವಾಮಿ ಕೋಲಾರ ಜಿಲ್ಲೆಯ ಹೆಚ್ಚುವರಿ ಎಸ್ಪಿ ಆಗಿ, ಎಂ.ವಿಜಯಕುಮಾರ್ ಹಾವೇರಿಯ ಹೆಚ್ಚುವರಿ ಎಸ್ಪಿಯಾಗಿದ್ದಾರೆ. ಇನ್ನು, ಎಚ್.ಮಂಜುನಾಥ ಬಾಬು ಹಾಗೂ ಅನೀಲ್ ಕುಮಾರ್ ಎಸ್.ಭೂಮರೆಡ್ಡಿ ಡಿಸಿಆರ್‍ಇ ಎಸ್ಪಿಗಳಾಗಿದ್ದು, ವಿ.ಬಿ.ಭಾಸ್ಕರ್ ಐಎಸ್‍ಡಿ ಎಸ್ಪಿ, ಎನ್.ವಾಸುದೇವರಾಯ ಅವರನ್ನು ರಾಜ್ಯ ಗುಪ್ತವಾರ್ತೆಯ ಎಟಿ ಘಟಕ ಎಸ್ಪಿಯಾಗಿ ನೇಮಿಸಲಾಗಿದೆ.

ಈ ಮೂಲಕ 17 ಮಂದಿ ಡಿವೈಎಸ್‍ಪಿಗಳು ವೇತನ ಶ್ರೇಣಿ 70,850 ರಿಂದ 1.07 ಲಕ್ಷದವರೆಗಿನ ವೃಂದಕ್ಕೆ ಸೇರ್ಪಡೆಯಾಗಿದ್ದಾರೆ ಎಂದು ಸರಕಾರದ ಅಧೀನ ಕಾರ್ಯದರ್ಶಿ ರಾಜೇಶ್ ಎಸ್. ಸೂಳಿಕೇರಿ ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News