×
Ad

ನಾವು ಸತ್ಯದ ಪರವಾಗಿದ್ದೇವೆ. ಯಾರ ಪರ, ವಿರುದ್ಧವೂ ಇಲ್ಲ: ಗೃಹ ಸಚಿವ ಬೊಮ್ಮಾಯಿ

Update: 2021-04-06 23:04 IST

ಕಲಬುರಗಿ, ಎ.6: ಸಿಡಿ ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ಎಸ್‍ಐಟಿಗೆ ನ್ಯಾಯಸಮ್ಮತವಾಗಿ ಕೆಲಸ ಮಾಡಲು ಸೂಚನೆ ನೀಡಿದ್ದೇನೆ. ನಾವು ಸತ್ಯದ ಪರವಾಗಿದ್ದೇವೆ. ಯಾರ ಪರ ಅಥವಾ ವಿರುದ್ಧವಿಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ಮಂಗಳವಾರ ಕಲಬುರಗಿಯಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್‍ಐಟಿಗೆ ಕ್ರಮಬದ್ದ, ನ್ಯಾಯಸಮ್ಮತವಾಗಿ ಕ್ರಮ ಕೈಗೊಳ್ಳುವಂತೆ ಸೂಚನೆ ಕೊಟ್ಟಿದ್ದೇನೆ. ಅಲ್ಲಿ ನಡೆಯುವ ವಿದ್ಯಮಾನಗಳ ಬಗ್ಗೆ ನಾನು ಯಾವುದೆ ಪ್ರತಿಕ್ರಿಯೆ ನೀಡುವುದಿಲ್ಲ. ಏನಾದರೂ ಇದ್ದರೆ ಎಸ್‍ಐಟಿಯವರೇ ಮಾಹಿತಿ ನೀಡುತ್ತಾರೆ ಎಂದರು.

ಸಿಡಿ ಪ್ರಕರಣ ತನಿಖೆ ಪ್ರಗತಿಯ ಬಗ್ಗೆ ನ್ಯಾಯಾಲಯ ಕೇಳಿದ ಮಾಹಿತಿ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಎಲ್ಲ ಪ್ರಕ್ರಿಯೆಗಳನ್ನೂ ಕಾನೂನು ಪ್ರಕಾರವೇ ಮಾಡಲಾಗುತ್ತದೆ. ಹೈಕೋರ್ಟ್ ಕೇಳಿದ ಮಾಹಿತಿಯನ್ನು ಕಾನೂನು ಪ್ರಕಾರವೇ ನೀಡಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News