×
Ad

ರಾಜ್ಯದಲ್ಲಿ ಕೊರೋನ ಹೆಚ್ಚಳ: ಖಾಸಗಿ ಆಸ್ಪತ್ರೆಗಳ ಮೇಲೆ ನಿಗಾವಹಿಸಲು ಐಎಎಸ್, ಐಪಿಎಸ್ ಅಧಿಕಾರಿಗಳಿಗೆ ಆದೇಶ

Update: 2021-04-06 23:50 IST

ಬೆಂಗಳೂರು, ಎ.6: ರಾಜ್ಯದಲ್ಲಿ ಕೊರೋನ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ನಿಗದಿಪಡಿಸಿರುವ ದರದಲ್ಲಿ ರೋಗಿಗಳಿಗೆ ಹಾಸಿಗೆಗಳನ್ನು ಮೀಸಲಿಡುವಂತೆ ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಖಾಸಗಿ ವೈದ್ಯಕೀಯ ಸಂಸ್ಥೆಗಳು ಹಾಸಿಗೆಗಳನ್ನು ಮೀಸಲಿರಿಸುವ ಕುರಿತು ಸರಕಾರಿ ಸುತ್ತೋಲೆಯಲ್ಲಿನ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ನಿಗಾವಹಿಸುವ ಸಲುವಾಗಿ ಮತ್ತು ಆಸ್ಪತ್ರೆಯ ಹಾಸಿಗೆಗಳು ಲಭ್ಯವಾಗುವಂತೆ ಮಾಡುವ ಸಲುವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ವಲಯಗಳಿಗೆ ಸಂಬಂಧಿಸಿದಂತೆ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳನ್ನು ಒಳಗೊಂಡ ನೋಡಲ್ ಅಧಿಕಾರಿಗಳ ತಂಡವನ್ನು ಈಗಾಗಲೇ ರಚಿಸಿದ್ದು, ಈ ತಂಡಗಳು ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ಆದೇಶಿಸಲಾಗಿದೆ.

ಪೂರ್ವ-1: ಕ್ಯಾಪ್ಟನ್ ಮಣಿವಣ್ಣನ್, ಅಲೋಕ್‍ಕುಮಾರ್, ಪೂರ್ವ 2: ಮೊಹಮ್ಮದ್ ಮೊಹ್ಸಿನ್, ಹರಿಶೇಖರನ್ ಪಿ,. ಮಹದೇವಪುರ: ಉಮಾ ಮಹದೇವನ್, ಸುನಿಲ್ ಅಗರ್‍ವಾಲ್, ಪಶ್ಚಿಮ: ಡಾ.ಎಂ.ಟಿ.ರೇಜು, ಕೆ.ಟಿ.ಬಾಲಕೃಷ್ಣ, ದಕ್ಷಿಣ ಡಾ.ಬಗಾದಿ ಗೌತಮ್, ಡಾ.ರಾಮಚಂದ್ರ ರಾವ್, ಆರ್.ಆರ್.ನಗರ ಮತ್ತು ಬೊಮ್ಮನಹಳ್ಳಿ: ಡಾ.ವಿ.ರಾಮ್ ಪ್ರಸಾತ್ ಮನೋಹರ್, ಡಾ.ರಾಮ್ ನಿವಾಸ್, ಯಲಹಂಕ-ದಾಸರಹಳ್ಳಿ: ಡಾ.ಏಕರೂಪ್ ಕೌರ್, ಡಾ.ರೋಹಿಣಿ ಕಟೋಚ್ ಸೇಪಟ್ ಅವರಿಗೆ ಖಾಸಗಿ ಆಸ್ಪತ್ರೆಗಳ ಮೇಲೆ ನಿಗಾವಹಿಸುವಂತೆ ಆದೇಶ ಹೊರಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News