×
Ad

ಕೊಡಗಿಗೂ ತಟ್ಟಿದ ಬಸ್ ಮುಷ್ಕರದ ಬಿಸಿ: ಪರದಾಡಿದ ಪ್ರಯಾಣಿಕರು

Update: 2021-04-07 16:18 IST

ಮಡಿಕೇರಿ, ಎ.7: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಕೆಎಸ್‍ಆರ್‍ಟಿಸಿ ನೌಕರರು ನಡೆಸುತ್ತಿರುವ ಮುಷ್ಕರದ ಬಿಸಿ ಕೊಡಗು ಜಿಲ್ಲೆಯನ್ನೂ ಕೂಡ ಕಾಡಿತು. 

ಜಿಲ್ಲೆಯಲ್ಲಿ ಸರ್ಕಾರಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡು ಬಸ್ ನಿಲ್ದಾಣಗಳು ಬಿಕೋ ಎನ್ನುತ್ತಿದ್ದವು. ಮುಷ್ಕರದ ಬಗ್ಗೆ ಮಾಹಿತಿ ಇಲ್ಲದ ಕೆಲವು ಪ್ರಯಾಣಿಕರು ಬಸ್ ನಿಲ್ದಾಣದಲ್ಲೇ ಪರದಾಡಿದರು. ಮಡಿಕೇರಿ ನಗರದಲ್ಲಿ ಖಾಸಗಿ ಬಸ್, ವ್ಯಾನ್ ಹಾಗೂ ಇತರ ವಾಹನಗಳು ಮೈಸೂರು ಮತ್ತು ಮಂಗಳೂರು ಕಡೆಗೆ ಪ್ರಯಾಣಿಕರನ್ನು ಕರೆದೊಯ್ದವು. 

ಸರ್ಕಾರಿ ಬಸ್ ನ ಕೊರತೆಯಿಂದಾಗಿ ಖಾಸಗಿ ವಾಹನಗಳಿಗೆ ಬೇಡಿಕೆ ಹೆಚ್ಚಾಗಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News