ದಕ್ಷಿಣ ಕೊಡಗಿನಲ್ಲಿ ಮತ್ತೆ ಹುಲಿ ದಾಳಿ; ಹಸು ಸಾವು, ಗ್ರಾಮಸ್ಥರಲ್ಲಿ ಆತಂಕ
Update: 2021-04-07 16:21 IST
ಮಡಿಕೇರಿ, ಎ.7: ಹುಲಿ ದಾಳಿಗೆ ಹಸುವೊಂದು ಬಲಿಯಾದ ಘಟನೆ ದಕ್ಷಿಣ ಕೊಡಗಿನ ದೇವನೂರು ಗ್ರಾಮದಲ್ಲಿ ನಡೆದಿದೆ.
ಅರಮನಮಾಡ ಕೃಷ್ಣ ಎಂಬುವವರಿಗೆ ಸೇರಿದ ಹಸು ಇದಾಗಿದ್ದು, ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಇದೇ ಮೊದಲ ಬಾರಿಗೆ ದೇವನೂರು ಗ್ರಾಮದಲ್ಲಿ ಹುಲಿ ದಾಳಿಯಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿದೆ. ಹುಲಿ ಹಾವಳಿ ತಡೆಗೆ ಅರಣ್ಯ ಅಧಿಕಾರಿಗಳು ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಕಳೆದ ಎರಡು ತಿಂಗಳುಗಳಿಂದ ಹುಲಿ ದಾಳಿಯಿಂದ ಬೇಸತ್ತಿದ್ದ ದಕ್ಷಿಣ ಕೊಡಗಿನ ಜನ ಕಳೆದ ಒಂದು ವಾರದಿಂದ ಯಾವುದೇ ಆತಂಕವಿಲ್ಲದೆ ದಿನದೂಡುತ್ತಿದ್ದರು. ಇದೀಗ ಮತ್ತೆ ವನ್ಯಜೀವಿ ದಾಳಿಯಾಗಿದ್ದು, ಭಯದ ವಾತಾವರಣ ಮೂಡಿದೆ.