ರಾಜ್ಯದಲ್ಲಿ 50 ಲಕ್ಷ ಡೋಸ್ ಪೂರೈಕೆ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್

Update: 2021-04-07 13:09 GMT

ಬೆಂಗಳೂರು, ಎ.7: ಕರ್ನಾಟಕ ಇಂದಿಗೆ 50 ಲಕ್ಷ ಡೋಸ್ ಕೊರೋನ ಲಸಿಕೆ ವಿತರಣೆ ಪೂರೈಸಿದೆ. ಇಂದು ಮಧ್ಯಾಹ್ನ 2 ಗಂಟೆ ವೇಳೆಗೆ ಒಟ್ಟು 45,13,857 ಜನರಿಗೆ ಮೊದಲನೇ ಡೋಸ್ ನೀಡಲಾಗಿದ್ದು, 5,02,838 ಜನ ಎರಡೂ ಡೋಸ್ ಪಡೆದಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ರಾಜ್ಯಾದ್ಯಂತ 5,564 ಸರಕಾರಿ ಹಾಗೂ 609 ಖಾಸಗಿ ಸೇರಿದಂತೆ ಒಟ್ಟು 6,173 ಕೇಂದ್ರಗಳಲ್ಲಿ ಲಸಿಕೆ ವಿತರಿಸಲಾಗುತ್ತಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News