ಕೇಂದ್ರ ಭದ್ರತಾ ಪಡೆಗಳ ಕುರಿತ ಹೇಳಿಕೆಗೆ ವಿವರಣೆ ನೀಡಲು ಮಮತಾ ಬ್ಯಾನರ್ಜಿಗೆ ಚುನಾವಣಾ ಆಯೋಗ ಸೂಚನೆ

Update: 2021-04-09 05:48 GMT

ಹೊಸದಿಲ್ಲಿ: ಕೇಂದ್ರ ಭದ್ರತಾ ಪಡೆಗಳಿಗೆ ‘ಘೇರಾವ್’ ಹಾಕಿ ಎಂದು ಬಂಗಾಳ ಚುನಾವಣಾ ಪ್ರಚಾರದ ವೇಳೆ ಜನರಿಗೆ ಕರೆ ನೀಡಿದ ವಿಚಾರಕ್ಕೆ ಸಂಬಂಧಿಸಿ ವಿವರಣೆ  ನೀಡುವಂತೆ ಚುನಾವಣಾ ಆಯೋಗವು ಇಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ನೋಟಿಸ್ ನೀಡಿದೆ.

ಚುನಾವಣಾ ಆಯೋಗಯು ಎರಡನೇ ಬಾರಿ ಮಮತಾ ಬ್ಯಾನರ್ಜಿಗೆ ನೋಟಿಸ್ ನೀಡಿದೆ.
ತನ್ನ ಭಾಷಣದ ಕುರಿತು ನಾಳೆ ಬೆಳಗ್ಗೆ 11 ಗಂಟೆಗೆ ಉತ್ತರಿಸುವಂತೆ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ತಿಳಿಸಲಾಗಿದೆ. ಈ ಹೇಳಿಕೆಯು ಮಾದರಿ ನೀತಿ ಸಂಹಿತೆಯ ಹಲವಾರು ಸೆಕ್ಷನ್ ಗಳನ್ನು ಹಾಗೂ ಕಾನೂನನ್ನು ಉಲ್ಲಂಘಿಸಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಚುನಾವಣಾ ಆಯೋಗವು ಮಾರ್ಚ್ 28 ಹಾಗೂ ಎಪ್ರಿಲ್ 7ರ ಮಮತಾರ ಭಾಷಣಗಳನ್ನು ಉಲ್ಲೇಖಿಸಿದೆ. ಕೇಂದ್ರ ಭದ್ರತಾ ಪಡೆಗಳು ಮಹಿಳಾ ಮತದಾರರಿಗೆ ಮತ ಚಲಾಯಿಸಲು ಅವಕಾಶ ನೀಡದೇ ಬೆದರಿಸುತ್ತಿವೆ ಎಂದು ತನ್ನ ಭಾಷಣದಲ್ಲಿ ಆರೋಪಿಸಿದ್ದರು. ಕೇಂದ್ರ ಪಡೆಗಳಿಗೆ ಭಯಪಡದೆ ಅವರಿಗೆ 'ಘೇರಾವ್' ಹಾಕಬೇಕೆಂದು ಮಹಿಳಾ ಮತದಾರರನ್ನು ಮಮತಾ ಒತ್ತಾಯಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News