×
Ad

ಶಿವಮೊಗ್ಗ: 16 ಕೆಜಿ ಗಾಂಜಾ, 4 ಬಂದೂಕು ಸಹಿತ ಆರೋಪಿ ಸೆರೆ

Update: 2021-04-09 14:29 IST

ಶಿವಮೊಗ್ಗ: ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಹೊಸನಗರ ಪೊಲೀಸರು ಬಂಧಿಸಿದ್ದಾರೆ.

ಇಲ್ಲಿಗೆ ಸಮೀಪದ ನಂದ್ಯಾಲಕೊಪ್ಪದ ಸುನೀಲ್ (45) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಖಚಿತ ಮಾಹಿತಿ‌ ಮೇರೆಗೆ ಗುರುವಾರ ದಾಳಿ ನಡೆಸಿದ ಪೊಲೀಸರು ಆರೋಪಿಯ ಮನೆ ಮುಂದೆ ನಿಲ್ಲಿಸಿದ್ದ ಕಾರಿನಲ್ಲಿ 5 ಲಕ್ಷ ರೂ‌. ಮೌಲ್ಯದ 16.250 ಕೆಜಿ ಗಾಂಜಾ,4 ಬಂದೂಕು, ಜೀವಂತ ಮದ್ದುಗುಂಡುಗಳು, 3500 ರೂ. ನಗದು, ಎರಡು ಮೊಬೈಲ್ ವಶಕ್ಕೆ ಪಡೆದುಕೊಂಡಿದ್ದಾರೆ.

ಆರೋಪಿಯನ್ನು ಬಂಧಿಸಿ, ಆತನ ವಿರುದ್ದ‌ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News