×
Ad

ಎನ್.ಎಸ್.ಯು.ಐ ಸಂಸ್ಥಾಪನಾ ದಿನಾಚರಣೆ

Update: 2021-04-09 15:08 IST

ಮಂಗಳೂರು : ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (ಎನ್.ಎಸ್.ಯು.ಐ) ಸಂಸ್ಥಾಪನಾ ದಿನಾಚರಣೆ ಯ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾ ಹಾಗೂ ಮಂಗಳೂರು ದಕ್ಷಿಣ ಎನ್.ಎಸ್.ಯು.ಐ ಘಟಕದ ವತಿಯಿಂದ ಮಲ್ಲಿಕಟ್ಟೆಯ  ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಭವನದ ಮುಂಭಾಗದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.

 ದಕ್ಷಿಣ ಕನ್ನಡ ಜಿಲ್ಲಾ ಎನ್.ಎಸ್.ಯು.ಐ ಅಧ್ಯಕ್ಷ ಸವಾದ್ ಸುಳ್ಯ ಹಾಗೂ ಮಂಗಳೂರು ದಕ್ಷಿಣ ಎನ್.ಎಸ್.ಯು.ಐ ಘಟಕ ಅಧ್ಯಕ್ಷ ಶೌನಕ್ ರೈ ಧ್ವಜಾರೋಹಣ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಗಣೇಶ್ ಪೂಜಾರಿ, ಜಿಲ್ಲಾ ಸೇವಾದಳ ಮುಖಂಡ ಉದಯ್ ಕುಂದರ್, ಯುವ ಕಾಂಗ್ರೆಸ್ ಮುಖಂಡ ಅನ್ಸಾರುದ್ದೀನ್ ಸಾಲ್ಮರ, ಕ್ರಸ್ಟರ್, ಪ್ರಜ್ವಲ್, ಅಯಾಝ್, ಹರ್ಷಿತ್, ಗ್ಲಾನಲ್, ಹರ್ಷಿತ್ ಗೌಡ, ಜೋಶ್ವ, ಆ್ಯರನ್, ಆ್ಯಲ್ಡನ್, ಕೆವಿನ್, ಅಶ್ವಿನ್, ರೊಯ್ಸನ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News