×
Ad

ಸಾರಿಗೆ ನೌಕರರ ಮುಷ್ಕರ: ಚಾಲನಾ ತರಬೇತಿಯಲ್ಲಿರುವ ಅಭ್ಯರ್ಥಿಗಳ ತಾತ್ಕಾಲಿಕ ನಿಯೋಜನೆಗೆ ಆದೇಶ

Update: 2021-04-09 20:03 IST

ಬೆಂಗಳೂರು, ಎ. 9: ಚಾಲಕ, ಚಾಲಕ ಕಂ-ನಿರ್ವಾಹಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಚಾಲನಾ ವೃತ್ತಿ ಪರೀಕ್ಷೆಯಲ್ಲಿ ಶೇ.40ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದು ಆಯ್ಕೆಯಾಗಿರುವ ಅಭ್ಯರ್ಥಿಗಳನ್ನು ತಾತ್ಕಾಲಿಕವಾಗಿ ಕರ್ತವ್ಯಕ್ಕೆ ಉಪಯೋಗಿಸಿಕೊಳ್ಳಲು ಕೆಎಸ್ಸಾರ್ಟಿಸಿ ವ್ಯವಸ್ಥಾಪಕರು ಆದೇಶ ಹೊರಡಿಸಿದ್ದಾರೆ.

ಅದರನ್ವಯ ಸದರ ಅಭ್ಯರ್ಥಿಗಳು ಕೆಎಸ್ಸಾರ್ಟಿಸಿ ಕೇಂದ್ರ ಕಚೇರಿಯ ಗಣಕ ಇಲಾಖೆಯಿಂದ ಎಸ್ಸೆಮೆಸ್ ಮೂಲಕ ವರದಿ ಮಾಡಿಕೊಳ್ಳಲು ಸಂದೇಶ ರವಾನಿಸಲಾಗಿದ್ದು ಸದರಿಯವರು ವಿಭಾಗಕ್ಕೆ ವರದಿ ಮಾಡಿಕೊಂಡಲ್ಲಿ ದೈಹಿಕ/ದೃಷ್ಟಿ ಸಾಮರ್ಥ್ಯ ಪ್ರಮಾಣ ಪತ್ರ/ಕೋವಿಡ್ ನೆಗೆಟಿವ್ ವರದಿ ಕಡ್ಡಾಯ. ಭಾರೀ ವಾಹನ ಚಾಲನಾ ಪರವಾನಗಿ ಹೊಂದಿರುವುದು ಕಡ್ಡಾಯ. ಪ್ರತಿದಿನದ ಕರ್ತವ್ಯಕ್ಕೆ 600 ರೂ., ನಿರ್ವಾಹಕರಿಗೆ 500 ರೂ. ದಿನಗೂಲಿಗೆ ಅರ್ಹರಾಗಿರುತ್ತಾರೆ.

ಸದರಿಯವರಿಗೆ ವಾರದ ರಜೆ ಹೊರತುಪಡಿಸಿ ಬೇರೆ ಯಾವುದೇ ರಜೆ ಸೌಲಭ್ಯಗಳಿಗೆ ಅರ್ಹರಿರುವುದಿಲ್ಲ. ಸದರಿಯವರ ವಿರುದ್ಧ ಗಂಭೀರ ಅಪಘಾತ ಪ್ರಕರಣದಲ್ಲಿ ಭಾಗಿಯಾಗಿದ್ದಲ್ಲಿ ಕರ್ತವ್ಯ ನಿಲುಗಡೆಗೊಳಿಸಲಾಗುವುದು. ಆದೇಶವು ತಾತ್ಕಾಲಿಕವಾಗಿದ್ದು, ಯಾವುದೇ ಸಮಯದಲ್ಲಿ ರದ್ದುಗೊಳಿಸವಹುದಾಗಿದೆ. ಈ ಅವಧಿಯನ್ನು ನೇಮಕಾತಿಗೆ ಯಾವುದೇ ಹಕ್ಕು ಎಂದು ಪರಿಗಣಿಸಲಾಗುವುದು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News