×
Ad

ಸರಸ್ವತಿ ವಿ.ಆರ್. ರಾಮಯ್ಯ ನಿಧನ

Update: 2021-04-09 23:46 IST

ಬೆಂಗಳೂರು, ಎ. 9: ಮಾಜಿ ಸಚಿವ ಎಂ.ಆರ್. ಸೀತಾರಾಮ್ ಅವರ ಅತ್ತೆ ಸರಸ್ವತಿ ವಿ.ಆರ್. ರಾಮಯ್ಯ ಅವರು ಬೆಂಗಳೂರಿನಲ್ಲಿ ಗುರುವಾರ ನಿಧನರಾದರು.

ಜಯನಗರದ ನಿವಾಸಿಯಾದ ಅವರಿಗೆ 83 ವರ್ಷ ವಯಸ್ಸಾಗಿತ್ತು. ಅವರ ಪತಿ ವಿ.ಆರ್. ರಾಮಯ್ಯ ಅವರು ಇಂಜಿಯರ್ ಆಗಿ ಸರಕಾರಿ ಸೇವೆ ಸಲ್ಲಿಸಿದ್ದರು. ಲಿಂಗನಮಕ್ಕಿ ಸೇರಿ ಹಲವಾರು ಅಣೆಕಟ್ಟೆಗಳು, ಸರ್ಕಾರದ ಅನೇಕ ಕಟ್ಟಡಗಳ ನಿರ್ಮಾಣದಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದರು.

ಸರಸ್ವತಿ ವಿ.ಆರ್. ರಾಮಯ್ಯ ಅವರು ಐವರು ಮಕ್ಕಳನ್ನು ಅಗಲಿದ್ದಾರೆ.  

ಲಕ್ಷ್ಮೀಪುರದ ಚಿತಾಗಾರದಲ್ಲಿ ಅವರ ಪಾರ್ಥೀವ ಶರೀರದ ಅಂತ್ಯ ಸಂಸ್ಕಾರ ಇಂದು ನೆರವೇರಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News