ಉಪಮುಖ್ಯಮಂತ್ರಿ ಗೋವಿಂದ ಕಾರಜೋಳಗೆ ಕೊರೋನ ಸೋಂಕು
Update: 2021-04-09 23:54 IST
ಬೆಳಗಾವಿ, ಎ.9: ಕಳೆದ ಎರಡು ದಿನಗಳಿಂದ ಕೊರೋನ ಸೋಂಕಿಗೆ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದೇನೆಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ಶುಕ್ರವಾರ ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ನಾಡಿನ ಬಹುಭಾಗಗಳಲ್ಲಿ ಸಾರ್ವಜನಿಕರ ಸ್ವಾಸ್ಥ್ಯಕ್ಕೆ ಮಾರಕವಾಗಿರುವ ಕೊರೋನ ಸಾಂಕ್ರಾಮಿಕ ರೋಗ ನನಗೂ ತಗಲಿದೆ. ಕಳೆದ ವಾರ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ನಾನು ಬಿಜೆಪಿ ಅಭ್ಯರ್ಥಿಯ ಪರವಾಗಿ ಪ್ರಚಾರತೊಡಗಿದ್ದೆ. ಎ.10, 11ರಂದು ಮುಖ್ಯಮಂತ್ರಿ ಯಡಿಯೂರಪ್ಪ ಜತೆ ಮತ್ತೊಂದು ಸಲ ಪ್ರಚಾರ ಮಾಡುವ ಕಾರ್ಯಕ್ರಮವಿತ್ತು. ಕೋವಿಡ್ ಸೋಂಕಿನಿಂದಾಗಿ ಪ್ರಚಾರ ಕಾರ್ಯದಲ್ಲಿ ತೊಡಗಲು ಸಾಧ್ಯವಾಗುತ್ತಿಲ್ಲ. ವೈದ್ಯತಜ್ಞರು ಚಿಕಿತ್ಸೆ ನೀಡುತ್ತಿದ್ದು, ಈಗ ನನ್ನ ಆರೋಗ್ಯ ಸುಧಾರಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.