ನೈಟ್ ಕರ್ಫ್ಯೂ: ಕೈಗಾರಿಕೆಗಳಿಗೆ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಿದ ರಾಜ್ಯ ಸರಕಾರ

Update: 2021-04-10 16:55 GMT

ಬೆಂಗಳೂರು, ಎ.10: ಕೊರೋನ ಎರಡನೆ ಅಲ ನಿಯಂತ್ರಣ ದೃಷ್ಟಿಯಿಂದ 'ನೈಟ್​ ಕರ್ಪ್ಯೂ' ಹೇರಿರುವ ಹಿನ್ನಲೆ ರಾಜ್ಯ ಸರಕಾರವು ಕೈಗಾರಿಕೆಗಳಿಗೆ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಿದೆ.

ನೌಕರರು ಕೈಗಾರಿಕೆಗಳಿಗೆ ತೆರಳಲು ಇರುವ ವಾಹನಗಳಿಗೆ ಅನುಮತಿ ನೀಡಿದ್ದು, ಆ ವಾಹನಗಳಿಗೆ ಅದೇ ಕಂಪೆನಿಯ ಅಧಿಕೃತ ಪತ್ರ ಕಡ್ಡಾಯವಾಗಿದೆ ಎಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಸೂಚಿಸಿದ್ದಾರೆ.

ಎಲ್ಲ ಸಿಬ್ಬಂದಿಗಳು ಅವರ ಕಂಪನಿಯ ಗುರುತಿನ ಚೀಟಿ ಕಡ್ಡಾಯವಾಗಿ ಅವರ ಬಳಿ ಇರಬೇಕು. ಕೋವಿಡ್-19 ಮಾರ್ಗಸೂಚಿಯನ್ನು ಕಡ್ಡಾಯವಾಗಿ ಎಲ್ಲರು ಪಾಲಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಸೋಂಕು ನಿಯಂತ್ರಣಕ್ಕೆ ಬೆಂಗಳೂರು ನಗರ, ಮೈಸೂರು, ಮಂಗಳೂರು, ಕಲ್ಬುರ್ಗಿ, ಬೀದರ್​, ತುಮಕೂರು, ಉಡುಪಿ-ಮಣಿಪಾಲ ನಗರಗಳಲ್ಲಿ ರಾತ್ರಿ 20ರಿಂದ ಬೆಳಗ್ಗೆ 5ರ ವರೆಗೆ ನೈಟ್ ಕರ್ಫ್ಯೂ ಹೇರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News